ಬೆಂಗಳೂರು:ನನ್ನ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಐಟಿ ದಾಳಿಗೆ ಜೆಡಿಎಸ್ ಮುಖಂಡ ಫಾರೂಕ್ ಕಿಡಿ ಕಿಡಿ
ಕರ್ನಾಟಕದಲ್ಲಿ ಹಲವು ಪ್ರಭಾವಿಗಳ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ವಿರುದ್ಧ ಜೆಡಿಎಸ್ ಮುಖಂಡ ಫಾರೂಕ್ ಕಿಡಿಕಾರಿದ್ದಾರೆ.
ಜೆಡಿಎಸ್ ಮುಖಂಡ ಬಿ ಎಂ ಫಾರೂಕ್
ನಗರದ ರೆಸಿಡೆನ್ಸಿ ರಸ್ತೆಯ ಕಚೇರಿ ಬಳಿ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಬಗ್ಗೆ ನಿನ್ನೆಯೇ ಹೇಳಿದ್ದರು. ಐಟಿ ದಾಳಿಗೆ ನಾವು ಹೆದರಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರ ತನಿಖೆಗೆ ಅಗತ್ಯವಾದ ಎಲ್ಲಾ ಮಾಹಿತಿಯನ್ನ ಒದಗಿಸುವೆ ಎಂದರು.
Last Updated : Mar 28, 2019, 1:50 PM IST