ಕರ್ನಾಟಕ

karnataka

ETV Bharat / state

ಕೋವಿಡ್​ ಟೆಸ್ಟ್​ ನಕಲಿ ವರದಿ ನೀಡುತ್ತಿದ್ದ ವೈದ್ಯ ದಂಪತಿ ಸೇರಿ 6 ಮಂದಿ ಅರೆಸ್ಟ್​​​​ - ಕೋವಿಡ್​ ಟೆಸ್ಟ್​ ನಕಲಿ ವರದಿ ನೀಡುತ್ತಿದ್ದ ವೈದ್ಯ ದಂಪತಿ ಸೇರಿ ಆರು ಮಂದಿ ಬಂಧನ

ಕೋವಿಡ್ ಟೆಸ್ಟ್​ನ ನಕಲಿ ವರದಿ ನೀಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ವೈದ್ಯ ದಂಪತಿ ಸೇರಿ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Bangalore
ಬಂಧಿತರು

By

Published : May 20, 2021, 10:31 AM IST

ಬೆಂಗಳೂರು:ಹಣ ಪಡೆದು ಕೋವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದ ವೈದ್ಯ ದಂಪತಿ ಸೇರಿ ಆರು ಮಂದಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ‌.

ಆಯುರ್ವೇದ ವೈದ್ಯೆ ಪ್ರಜ್ವಲ ದಂಪತಿ, ದಂತ ವೈದ್ಯ ಶೇಖರ್, ಡೇಟಾ ಆಪರೇಟರ್ ವರುಣ್, ಸ್ವ್ಯಾಬ್ ಕಲೆಕ್ಟರ್ ಈಶ್ವರ್ ಹಾಗೂ ಮೋಹನ್ ಬಂಧಿತ ಆರೋಪಿಗಳು. ಇವರು ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯರಾಗಿ ಹಾಗೂ ಸಿಬ್ಬಂದಿಯಾಗಿ ಕೋವಿಡ್ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬರುತ್ತಿದ್ದ ಜನರಿಂದ ಹಣ ಪಡೆದು ನಕಲಿ ವರದಿ ನೀಡುತ್ತಿದ್ದರಂತೆ. ಅಲ್ಲದೆ ರೆಮ್​​ಡಿಸಿವಿರ್ ಅಕ್ರಮ ಜಾಲದಲ್ಲಿಯೂ ತೊಡಗಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಓದಿ:ರಾಜ್ಯ ರಾಜಧಾನಿಯಲ್ಲಿ ತಗ್ಗಿದ ಕೊರೊನಾ ಅಬ್ಬರ: 9,463 ಹೊಸ ಪ್ರಕರಣ ಪತ್ತೆ

ABOUT THE AUTHOR

...view details