ಆನೇಕಲ್:ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಅಳವಡಿಸಿದ್ದ ಕನ್ನಡ ಧ್ವಜ ಮತ್ತು ಧ್ವಜ ಸ್ಥಂಭವನನ್ನು ಕಿತ್ತೆಸೆದ ಮಾನವ ಸಂಪನ್ಮೂಲ ಅಧಿಕಾರಿ ಮರಳುಸಿದ್ದಪ್ಪನ ವಿರುದ್ದ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಕನ್ನಡ ಧ್ವಜಕ್ಕೆ ಕನ್ನಡಿಗನಿಂದಲೇ ಅಪಮಾನ: ಪ್ರತಿಭಟನೆ
ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ ಕಾರ್ಖಾನೆಯ ಅಧಿಕಾರಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ನೆಕ್ಸ್ ಟೀರ್ ಆಟೋಮೇಟಿವ್ ಕಾರ್ಖಾನೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಾರ್ಮಿಕರು ಧ್ವಜ ಹಾರಿಸಿದ್ದರು. ಇದನ್ನು ಸಹಿಸದ ಹೆಚ್ಆರ್ ಕಂಬ ಕಿತ್ತೆಸೆದು ಕಂಬ ನೆಟ್ಟವರ ವಿರುದ್ದ ಆಕ್ಸಲ್ ಬ್ಲೇಡ್ ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದರು. ಈ ಹಿನ್ನಲೆಯಲ್ಲಿ ಅಧಿಕಾರಿಯ ವಿರುದ್ಧ ಕಾರ್ಮಿಕರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ವಿರೋಧಿತನಕ್ಕೆ ಸಿಡಿದೆದ್ದ ಕಾರ್ಮಿಕರು ಮತ್ತು ಸಾರ್ವಜನಿಕರು ಹೆಚ್ಆರ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಜಿಗಣಿ ಪೊಲೀಸರು ಆಗಮಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.