ಬೆಂಗಳೂರು: ಡಾ. ಕೆ. ಶಿವರಾಮಕಾರಂತ ಬಡಾವಣೆಯ ಅಧಿಸೂಚಿತ ಭೂ-ಪ್ರದೇಶಗಳಲ್ಲಿ 03-08-2018ರ ಮೊದಲು ನಿರ್ಮಿಸಿದ ಕಟ್ಟಡ-ಮನೆಗಳ ಬಗ್ಗೆ ಪರಿಶೀಲನೆ ನಡೆಸಲು, ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲು ಬಿಡಿಎ ಸಮಿತಿ ನಿರ್ಮಾಣ ಮಾಡಿದೆ.
ಶಿವರಾಮಕಾರಂತ ಬಡಾವಣೆ ಕಟ್ಟಡಗಳ ಪರಿಶೀಲನೆ: 3 ಸಹಾಯ ಕೇಂದ್ರಗಳು ಆರಂಭ
ಶಿವರಾಮಕಾರಂತ ಬಡಾವಣೆ ಕಟ್ಟಡಗಳ ಪರಿಶೀಲನೆಗೆ ಇದೇ ತಿಂಗಳ 15 ರಿಂದ ಅಂಬೇಡ್ಕರ್ ಸಮುದಾಯ ಭವನ-ಸೋಮಶೆಟ್ಟಿಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಬ್ಯಾಲಕೆರೆ ಹಾಗೂ ಡಾ.ಅಂಬೇಡ್ಕರ್ ಸಮುದಾಯ ಭವನ- ಸಿಂಗನಾಯಕನಹಳ್ಳಿಯಲ್ಲಿ ಸಹಾಯಕೇಂದ್ರ ಆರಂಭವಾಗಲಿದೆ.
ಸಮಿತಿಯು ಜನರ ಕಟ್ಟಡ-ಮನೆಗಳ ದಾಖಲೆ ಪರಿಶೀಲಿಸಲು ಮುಂದಿನ ಸೋಮವಾರದಿಂದ ಮೂರು ಸಹಾಯ ಕೇಂದ್ರಗಳಿಗೆ ಚಾಲನೆ ನೀಡಲಿದೆ. ಈಗಾಗಲೇ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಮೇಡಿ ಅಗ್ರಹಾರ, ವಡೇರಹಳ್ಳಿ ಪಂಚಾಯತ್ ನಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ.
15-03-21 ರಿಂದ ಅಂಬೇಡ್ಕರ್ ಸಮುದಾಯ ಭವನ-ಸೋಮಶೆಟ್ಟಿಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಬ್ಯಾಲಕೆರೆ ಹಾಗೂ ಡಾ.ಅಂಬೇಡ್ಕರ್ ಸಮುದಾಯ ಭವನ- ಸಿಂಗನಾಯಕನಹಳ್ಳಿಯಲ್ಲಿ ಸಹಾಯಕೇಂದ್ರ ಆರಂಭವಾಗಲಿದೆ. ನಾಗರಿಕರು ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ-ದಾಖಲೆಗಳನ್ನು ಸಲ್ಲಿಸಬಹುದಾಗಿದೆ.
ಎಲ್ಲಾ ಸಹಾಯ ಕೇಂದ್ರಗಳು ಸಾರ್ವಜನಿಕ ರಜಾ ದಿನ ಹೊರತುಪಡಿಸಿ, ಬೆಳಗ್ಗೆ 10-30 ರಿಂದ ಸಂಜೆ 4-30ರ ವರೆಗೆ ಕಾರ್ಯನಿರ್ವಹಿಸಲಿದೆ. ಆನ್ ಲೈನ್ ಮೂಲಕವೂ jcc.skl.in ನಲ್ಲಿ ಅಧಿಕೃತ ದಾಖಲೆ ಅಪ್ಲೋಡ್ ಮಾಡಬಹುದಾಗಿದೆ ಎಂದು ಸಮಿತಿಯ, ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ತಿಳಿಸಿದ್ದಾರೆ.