ಬೆಂಗಳೂರು: 74ನೇ ಸ್ವಾತಂತ್ರ್ಯ ದಿನೋತ್ಸವಕ್ಕೆ ದೇಶದ ಜನತೆಗೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶುಭಾಶಯ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು, ಇಂದು ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಇದರ ಮಧ್ಯೆಯೇ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕಿದೆ. ಕೊರೊನಾ ಎಂಬ ವೈರಸ್ ಇಡೀ ಮನುಕುಲವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಮ್ಮ ದೇಶವು ಕೊರೊನಾ ಸೋಂಕಿನಿಂದ ದೂರವಿರಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ ಎಂದಿದ್ದಾರೆ.
ನಮ್ಮ ದೇಶವು ಸೇರಿದಂತೆ ಅನೇಕ ದೇಶಗಳು ವೈರಸ್ ಓಡಿಸಲು ಪ್ರಯತ್ನ ಪಡುತ್ತಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಬಹಳ ಮುಖ್ಯ. ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದರೇ ಒಳಿತು. ಇಷ್ಟು ಮಾಡಿದ್ರೆ ಅರ್ಧ ವೈರಸ್‌ನಿಂದ ದೂರವಿರಬಹುದು. ಇದಕ್ಕೆ ಬೇಕಾದ ಔಷಧಿ ತಯಾರಿಕೆಯಲ್ಲಿ ನಮ್ಮ ದೇಶವು ಸೇರಿ ಹಲವು ರಾಷ್ಟ್ರಗಳು ಮುಂದಾಗಿದೆ.
ಪ್ರಮುಖವಾಗಿ ರಷ್ಯಾ ಮತ್ತು ಇಟಲಿ ದೇಶಗಳು ಔಷಧಿ ತಯಾರಿಕೆಯ ಕೊನೆಯ ಹಂತದಲ್ಲಿದೆ. ಅದಷ್ಟು ಬೇಗ ಔಷಧಿ ಕಂಡು ಹಿಡಿಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ನಿಮ್ಮ ಆರೋಗ್ಯದ ಜವಾಬ್ದಾರಿಯ ಬಗ್ಗೆ ನಿಗಾವಹಿಸಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.