ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಸಿಬ್ಬಂದಿಗೆ ಒತ್ತಡ ಕಡಿಮೆ ಮಾಡಲು ಪ್ರತಿಯೊಂದು ಠಾಣೆಗಳಲ್ಲೂ ಸಿಬ್ಬಂದಿಗೆ ಯೋಗ ತರಬೇತಿ, ಆಟ ಹಾಗೂ ಕ್ರಿಯಾತ್ಮಕವಾಗಿರಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಪೊಲೀಸರಿಗೂ ಬಂತು ಯೋಗಾ ಯೋಗ... ಆರಕ್ಷಕರ ಒತ್ತಡ ದೂರ ಮಾಡಲು ವಿವಿಧ ಆಸನ - ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಸಿಬ್ಬಂದಿಗೆ ಒತ್ತಡ ಕಡಿಮೆ ಮಾಡಲು ಪ್ರತಿಯೊಂದು ಠಾಣೆಗಳಲ್ಲೂ ಸಿಬ್ಬಂದಿಗೆ ಯೋಗ ತರಬೇತಿ, ಆಟ ಹಾಗೂ ಕ್ರಿಯಾತ್ಮಕವಾಗಿರಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಯೋಗ ಮಾಡಲು ಮುಂದಾದ ಪೊಲೀಸ್ ಸಿಬ್ಬಂದಿ
ಈ ಹಿನ್ನೆಲೆ ಕುಮಾರಸ್ವಾಮಿ ಪೊಲೀಸ್ ಠಾಣೆಯಿಂದ ಯೋಗ ತರಬೇತಿ ಆರಂಭವಾಗಿದೆ. ಬೆಳಗ್ಗೆಯಿಂದಲೂ ಸಾಕಷ್ಟು ರೀತಿ ಕೆಲಸ ಮಾಡಿ ಒತ್ತಡದಲ್ಲಿರುವ ಸಿಬ್ಬಂದಿಗೆ ಯೋಗ ಮಾಡಿಸುವ ಮೂಲಕ ಕುಮಾರಸ್ವಾಮಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಮಾದರಿಯಾಗಿದ್ದಾರೆ. ರಾಘವೇಂದ್ರ ಯೋಗ ಕೇಂದ್ರದ ವತಿಯಿಂದ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗುತ್ತಿದೆ.