ಕರ್ನಾಟಕ

karnataka

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ ಆರ್.ಅಶೋಕ್.. ಆಮೇಲೆ ಹೀಗಂದರು..

By

Published : Mar 19, 2021, 9:32 PM IST

ಬೆಳಗಾವಿ ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಮಾಡಲು ನಾಳೆ ಕೋರ್ ಕಮಿಟಿ ಸಭೆ ಇದೆ. ನಾನು ನನ್ನ ಅಭಿಪ್ರಾಯವನ್ನು ಇಂದೇ ಅವರಿಗೆ ತಿಳಿಸಿದ್ದೇನೆ..

R. Ashok news
ಆರ್. ಅಶೋಕ್

ಬೆಂಗಳೂರು :ಹಳ್ಳಿಗೆ ನಡೆಯಿರಿ ಕಂದಾಯ ಇಲಾಖೆ ಕಾರ್ಯಕ್ರಮದ ಕಾರಣ ನಾಳಿನ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾನು ನನ್ನ ಅಭಿಪ್ರಾಯವನ್ನು ಇಂದೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ತಿಳಿಸಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಗ್ರಾಮ ವಾಸ್ತವ್ಯ ಮತ್ತು ಬೈ ಎಲೆಕ್ಷನ್ ಕುರಿತಂತೆ ಆರ್. ಅಶೋಕ್ ಪ್ರತಿಕ್ರಿಯೆ..

ಓದಿ: ಮಹಾದಾಯಿ ವಿವಾದ: ಬಿಗಿ ಬಂದೋಬಸ್ತ್​ ಮಧ್ಯೆ ಜಂಟಿ ಪರಿಶೀಲನೆ, ಮಾಧ್ಯಮಗಳಿಗೆ ನಿರ್ಬಂಧ

ಕುಮಾರಕೃಪಾ ಅತಿಥಿ ಗೃಹದಲ್ಲಿ ಅರುಣ್ ಸಿಂಗ್ ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ. ಅವರ ಭೇಟಿಗೆ ನಿನ್ನೆಯೇ ಅನುಮತಿ ಪಡೆದುಕೊಂಡಿದ್ದೆ.

ಬೆಳಗಾವಿ ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಮಾಡಲು ನಾಳೆ ಕೋರ್ ಕಮಿಟಿ ಸಭೆ ಇದೆ. ನಾನು ನನ್ನ ಅಭಿಪ್ರಾಯವನ್ನು ಇಂದೇ ಅವರಿಗೆ ತಿಳಿಸಿದ್ದೇನೆ ಎಂದರು.

ನಾಳೆಯ ಕೋರ್ ಕಮಿಟಿ ಸಭೆಯಲ್ಲಿ ನಾನು ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಹಳ್ಳಿಗೆ ನಡೆಯಿರಿ ಕಂದಾಯ ಇಲಾಖೆ ಎಂದು ನಾಳೆ ಜಿಲ್ಲಾಡಳಿತದಿಂದ ಹಳ್ಳಿಯಲ್ಲಿ ವಾಸ್ತವ್ಯ ಮಾಡಲಾಗುತ್ತಿದೆ. ನಾನು ಧಾರವಾಡದ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ಇದು ಒಳ್ಳೆ ಕಾರ್ಯಕ್ರಮ, ಇಲಾಖೆಯಿಂದ ಮಾಡುತ್ತಿದ್ದೀರಿ ಹೋಗಿ ಬನ್ನಿ ಎಂದು ಅರುಣ್ ಸಿಂಗ್ ಹೇಳಿದ್ದಾರೆ.

ನನ್ನ ಅಭಿಪ್ರಾಯವನ್ನು ತಿಳಿಸುವಂತೆ ತಿಳಿಸಿದ್ದರು. ಆದ್ದರಿಂದ ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಯಾರಿಗೆ ಟಿಕೆಟ್ ಕೊಟ್ಟರು ನನ್ನ ಒಪ್ಪಿಗೆ ಇದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ABOUT THE AUTHOR

...view details