ಕರ್ನಾಟಕ

karnataka

ETV Bharat / state

ಜೆಡಿಎಸ್ ಸರ್ಕಾರ ಬಂದರೆ 'ಪಂಚರತ್ನ' ಕಾರ್ಯಕ್ರಮ ಅನುಷ್ಠಾನ : ಹೆಚ್ ಡಿ ಕುಮಾರಸ್ವಾಮಿ - ನಮ್ಮ ಪಕ್ಷಕ್ಕೆ ಅವಕಾಶ ಕೊಟ್ಟರೆ ' ಪಂಚರತ್ನ' ಕಾರ್ಯಕ್ರಮಗಳನ್ನು ತರುತ್ತೇನೆ

ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣ ನೋಡಿ ನನಗೆ ನಗು ಬರುತ್ತಿತ್ತು. ಕೊಪ್ಪಳದಲ್ಲಿ ಆಟಿಕೆ ತಯಾರಿಕೆಗೆ ನಾನು ಯೋಜನೆ ತಂದಿದ್ದೆ. ಕಾಂಪಿಟ್ ವಿತ್ ಚೈನಾ ಯೋಜನೆ ತಂದಿದ್ದೆ. ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಕೇಂದ್ರ ತಂದಿದ್ದೇ ನಾನು. ಆದರೆ, ಬಿಜೆಪಿ ನಿನ್ನೆ ಅಡಿಗಲ್ಲು ಹಾಕಿದ್ದಾರೆ. ಸೌಜನ್ಯಕ್ಕೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಮಾನವೀಯತೆ ಇಲ್ಲದ ಸರ್ಕಾರ ಇದು..

H D Kumaraswamy
ಹೆಚ್.ಡಿ. ಕುಮಾರಸ್ವಾಮಿ

By

Published : Jan 18, 2021, 7:44 PM IST

Updated : Jan 18, 2021, 8:38 PM IST

ಬೆಂಗಳೂರು: ನಮ್ಮ ಪಕ್ಷಕ್ಕೆ ಅವಕಾಶ ಕೊಟ್ಟರೆ ' ಪಂಚರತ್ನ' ಕಾರ್ಯಕ್ರಮಗಳನ್ನು ತರುತ್ತೇನೆ. ಪೂರ್ಣ ಪ್ರಮಾಣದಲ್ಲಿ ಅಧಿಕಾರ ಬಂದ ಐದು ವರ್ಷದಲ್ಲಿ ಪಂಚರತ್ನ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ. ಇದು ನನ್ನ ಸವಾಲ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಪಕ್ಷ ಸಂಘಟನೆ ಕುರಿತು ಪ್ರಮುಖ ನಾಯಕರ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚನೆಗೆ ಅವಕಾಶ ಕೊಟ್ಟರೆ ಪಂಚರತ್ನ ಕಾರ್ಯಕ್ರಮಗಳನ್ನ ತರುತ್ತೇನೆ. ಹೀಗಾಗಿ, ಜನರ ಮುಂದೆ ಹೋಗುತ್ತೇವೆ. ಜನರು ಸ್ವೀಕರಿಸುತ್ತಾರೋ, ಇಲ್ಲವೋ ನೋಡೋಣ ಎಂದರು.

'ಪಂಚರತ್ನ' ಕಾರ್ಯಕ್ರಮದ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ನನ್ನ ಯೋಜನೆಗಳನ್ನು ಬೇರೆಯವರು ಹೈಜಾಕ್ ಮಾಡಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಕ್ಷೇತ್ರಗಳ ಜೊತೆಗೆ ಸಾಲ ರಹಿತ ರೈತನ ಬದುಕು ರೂಪಿಸುವುದೇ ನನ್ನ ' ಪಂಚರತ್ನ' ಕಾರ್ಯಕ್ರಮಗಳಾಗಿವೆ. ಯುಕೆಜಿಯಿಂದ ಪಿಯುವರೆಗೆ ಕುಟುಂಬದ ಒಬ್ಬರಿಗೆ ಉಚಿತ ಶಿಕ್ಷಣ, ಪ್ರತಿಯೊಂದು ಕುಟುಂಬಕ್ಕೆ ಸೂರು ಕಲ್ಪಿಸುವುದು, ಯುವಕರಿಗೆ ಉದ್ಯೋಗ ಕಲ್ಪಿಸುವುದು ನನ್ನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.

ಹೆಚ್ ಡಿ ಕುಮಾರಸ್ವಾಮಿ

ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣ ನೋಡಿ ನನಗೆ ನಗು ಬರುತ್ತಿತ್ತು. ಕೊಪ್ಪಳದಲ್ಲಿ ಆಟಿಕೆ ತಯಾರಿಕೆಗೆ ನಾನು ಯೋಜನೆ ತಂದಿದ್ದೆ. ಕಾಂಪಿಟ್ ವಿತ್ ಚೈನಾ ಯೋಜನೆ ತಂದಿದ್ದೆ. ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಕೇಂದ್ರ ತಂದಿದ್ದೇ ನಾನು. ಆದರೆ, ಬಿಜೆಪಿ ನಿನ್ನೆ ಅಡಿಗಲ್ಲು ಹಾಕಿದ್ದಾರೆ. ಸೌಜನ್ಯಕ್ಕೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಮಾನವೀಯತೆ ಇಲ್ಲದ ಸರ್ಕಾರ ಇದು ಎಂದು ಟೀಕಿಸಿದರು.

ಹದಿನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಕಾಪಿ ಮಾಡಿಲ್ಲ. ನನ್ನದೇ ಯೋಜನೆಗಳನ್ನು ಕೊಟ್ಟಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ನನ್ನ ಕಾರ್ಯಕ್ರಮ ಎಂದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದೆ ಎಂದು ಹೇಳಿಕೊಂಡಿವೆ. ಆದರೆ, ಬಿಜೆಪಿಯ ಹಣೆಬರಹ ಗೊತ್ತಿದೆ. 36 ಸಾವಿರ ಮಂದಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿಕೊಂಡಿರುವುದನ್ನು ದುರ್ಬಿನ್ ಹಾಕಿಕೊಂಡು ನೋಡಬೇಕು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಒಳ್ಳೆಯ ಕೆಲಸ ಮಾಡಿದ್ದರೆ ಆತಂಕ ಪಡಬಹುದಿತ್ತು.ಆದರೆ, ಭಯಪಡುವಂತಹ ಉತ್ತಮ ಕೆಲಸ ಮಾಡುತ್ತಿಲ್ಲ. ಉಪಚುನಾವಣೆಯಲ್ಲಿ ಹಿನ್ನಡೆಯಾಗಿದ್ದರೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ನೀಡುವ ಮೂಲಕ ರಾಜ್ಯದ ಜನರು ಪಕ್ಷದೊಂದಿಗೆ ಇದ್ದಾರೆ ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಆಡಳಿತರೂಢ ಪಕ್ಷದ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಬಿಜೆಪಿಯಲ್ಲಿ ಸ್ವಯಂಕೃತ ಅಪರಾಧ ನಡೆಯುತ್ತಿದೆ. ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವ ದಿನ ದೂರ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

Last Updated : Jan 18, 2021, 8:38 PM IST

ABOUT THE AUTHOR

...view details