ಕರ್ನಾಟಕ

karnataka

ETV Bharat / state

ಐಎಮ್ಎ ದೋಖಾ: ಟನ್​ಗಟ್ಟಲೆ ಚಿನ್ನ ಕರಗಿಸಿದ್ದನಂತೆ ವಂಚಕ ಮನ್ಸೂರ್​

ಐಎಮ್ಎ ಹಗರಣದ ಆರೋಪಿ ಮನ್ಸೂರ್ ಖಾನ್ ಗೆ ಸೇರಿದ ತಿಲಕನಗರದ ಐಎಮ್ಎ ಜ್ಯುವೆಲರಿ ಹಾಗೂ ಯಶವಂತಪುರ ದಲ್ಲಿರುವ ಎರಡು ಕಚೇರಿಗಳ ಮೇಲೆ ಎಸ್ಐಟಿ ಏಕಕಾಲದಲ್ಲಿ ದಾಳಿ ನಡೆಸಿದೆ.

By

Published : Jun 25, 2019, 8:02 PM IST

ಬಗೆದಷ್ಟು ಬಯಲಿಗೆ ಮನ್ಸೂರ್ ರೋಚಕ ಕಹಾನಿ

ಬೆಂಗಳೂರು:ಬಹುಕೋಟಿ ಐಎಮ್ಎ ಹಗರಣ ಸಂಬಂಧ ದಿನ ಕಳೆದಂತೆ ಮತ್ತಷ್ಟು ಖಜಾನೆಗಳು ಹೊರ ಬೀಳುತ್ತಿವೆ .ಮನ್ಸೂರ್ ಖಾನ್ ನ ವಿಸ್ತಾರವಾದ ಕರಾಳ ದಂಧೆಯನ್ನ ಎಸ್ ಐಟಿ ಜಾಲಾಡುತ್ತಲೆ ಇದೆ.ಇವತ್ತು ಸಹ ಎಸ್ ಐಟಿ ಚಿನ್ನದ ಬೇಟೆಯನ್ನ ಮುಂದುವರೆಸಿದೆ

ಬಗೆದಷ್ಟು ಬಯಲಿಗೆ ಮನ್ಸೂರ್ ರೋಚಕ ಕಹಾನಿ

ಕಳೆದ ಒಂದು ವಾರದಿಂದ ಐಎಮ್ ಎ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಐಎಮ್ಎ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ‌ ನಡೆಸುತ್ತಿದೆ.‌ ಇಂದು ಸಹ ಮಾನ್ಸೂರ್ ಖಾನ್ ಗೆ ಸೇರಿದ ತಿಲಕನಗರದ ಐ ಎಮ್ಎ ಜ್ಯುವೆಲರಿ ಹಾಗೂ ಯಶವಂತಪುರ ದಲ್ಲಿರುವ ಎರಡು ಕಚೇರಿಗಳ ಮೇಲೆ ಎಸ್ ಐ ಟಿ ಏಕಕಾಲದಲ್ಲಿ ದಾಳಿ ನಡೆಸಿತ್ತು.

ಮಾನ್ಸೂರ್ ಖಾನ್ ಈ ಎರಡು ಕಚೇರಿಗಳಲ್ಲಿ ಚಿನ್ನ ವನ್ನ ಅಡವಿಟ್ಟುಕೊಂಡು ಹಣ ನೀಡುತ್ತಿದ್ದ. ಅಲ್ಲದೇ ಗೋಲ್ಡ್ ಲೋನ್ ಸಹ ನೀಡುತ್ತಿದ್ದ. ಈ ಹಿನ್ನೆಲೆ ದಾಳಿ ನಡೆಸಿದ ಎಸ್ ಐಟಿ ಮಹತ್ವದ ದಾಖಲೆಗಳು ಚಿನ್ನಭಾರಣಗಳನ್ನ ಜಪ್ತಿ ಮಾಡಿಕೊಂಡಿದೆ. ಕಳೆದ ಅಕ್ಟೋಬರ್ ಇಂದ ಇಲ್ಲಿಯವರೆಗೂ ಮನ್ಸೂರ್ ಬರೋಬ್ಬರಿ ಒಂದು ಟನ್ ಚಿನ್ನ ಕರಗಿಸಿದ್ದು ಎಸ್ಕೇಪ್ ಆಗುವ ಮೂರು ದಿನದ ಮುಂಚೆ ಮೂವತ್ತೈದು ಕೆಜಿ ಚಿನ್ನ ಕರಗಿಸಿದ್ದಾನಂತೆ . ಇನ್ನು ಮನ್ಸೂರ್ ಎಸ್ಕೇಪ್ ಆಗುವ ಐದು ದಿನಗಳ ಹಿಂದೆ ಚಿನ್ನವನ್ನು ಏರ್ ಪೋರ್ಟ್ ಮೂಲಕ‌ ಸಾಗಿಸಲಾಗದೆ , ಹವಾಲ‌ ಮೂಲಕ‌ ದುಬೈಗೆ ಹಣ ರವಾನೆ ಮಾಡಿಸಿದ್ದ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ.

ಹಾಗೆ ನಿನ್ನೆ ಐಎಂಎ ಜ್ಯುವೆಲರಿ ಹಾಗೂ ಮಳಿಗೆಗಳ ಮೇಲೆ ದಾಳಿ ಮಾಡಿ 41.62 ಕೆಜಿ ಚಿನ್ನಾಭರಣ, 14.5 ಕ್ಯಾರಟ್ ಡೈಮೆಂಡ್72.24 ಕೆ ಜಿ ಬೆಳ್ಳಿ 60 ಕ್ಯಾರಟ್ ಹರಳುಗಳು, 58 ಗುಂಡುಗಳು 32 ರಿವಾಲ್ವರ್,13.45 ಲಕ್ಷ ನಗದು ವಶ ಪಡಿಸಿದ್ದಾರೆ. ಹಾಗೆ ಲೇಡಿ ಕರ್ಜನ್ ರಸ್ತೆ ಬಳಿಯಿರುವ ಮಳಿಗೆಯಲ್ಲಿ 302 ಗ್ರಾಂ ಚಿನ್ನ, 71 ಕೆಜಿ 770 ಗ್ರಾಂ ತೂಕದ ಬೆಳ್ಳಿ, ಹಾಗೂ 5 ಲಕ್ಷದ 60 ಸಾವಿರ ನಗದು ವಶ ಪಡಿಸಿಕೊಂಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

ABOUT THE AUTHOR

...view details