ಕರ್ನಾಟಕ

karnataka

ETV Bharat / state

ಐಎಂಎ ಬಹುಕೋಟಿ ಹಗರಣ: ಮನ್ಸೂರ್ ಖಾನ್​​ಗೆ ಜಾಮೀನು - ಐಎಂಎ ಬಹುಕೋಟಿ ಹಗರಣ

ಈ ಹಿಂದೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಐಎಂಎ ಬಹುಕೋಟಿ ವಂಚನೆ ಆರೋಪ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್​ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

Khan
ಮನ್ಸೂರ್ ಖಾನ್ ಗೆ ಜಾಮೀನು

By

Published : Oct 28, 2020, 6:46 PM IST

Updated : Oct 28, 2020, 8:58 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮನ್ಸೂರ್ ಅಲಿ ಖಾನ್​ಗೆ ಹೈಕೋರ್ಟ್​​ ಷರತ್ತು ಬದ್ಧ ಜಾಮೀನು ನೀಡಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲಿಸಿದ್ದ ಕೇಸ್​ನಲ್ಲಿ ಮನ್ಸೂರ್​​ ಖಾನ್​ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಕೆಲವು ಷರತ್ತುಗಳನ್ನು ವಿಧಿಸಿ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಅಧೀನ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಸಾಕ್ಷಿ ನಾಶ ಮಾಡಬಾರದು. ಪ್ರಕರಣದ ವಿಚಾರಣೆ ಮುಗಿಯುವ ತನಕ ಆಸ್ತಿ ವಿಚಾರದಲ್ಲಿ ತಲೆ ಹಾಕಬಾರದು. 15 ದಿನಗಳಿಗೊಮ್ಮೆ‌ ಇಡಿ ಕಚೇರಿಗೆ ಭೇಟಿ ನೀಡಿ ಸಹಿ‌ ಹಾಕಬೇಕು. ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.

Last Updated : Oct 28, 2020, 8:58 PM IST

ABOUT THE AUTHOR

...view details