ಬೆಂಗಳೂರು:ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ವಂಚಕ ಮನ್ಸೂರ್ ಅಲಿ ಖಾನ್ನನ್ನು ಮರಳಿ ವಶಕ್ಕೆ ಪಡೆದಿದ್ದಾರೆ.
ಐಎಂಎ ವಂಚನೆ ಪ್ರಕರಣ: ಮನ್ಸೂರ್ ಮರಳಿ ವಶಕ್ಕೆ ಪಡೆದ ಎಸ್ಐಟಿ
ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಆರೋಪಿ ಮನ್ಸೂರ್ ಅಲಿ ಖಾನ್ನನ್ನು ಹೆಚ್ಚಿನ ವಿಚಾರಣೆಗಾಗಿ ಮರಳಿ ವಶಕ್ಕೆ ಪಡೆದಿದ್ದಾರೆ.
ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಂಚಕ ಮನ್ಸೂರ್ ಪರ ವರದಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನಿನ್ನೆ ವಿಚಾರಣೆಗೆ ಕರೆಸಿ ಇಂದು ಮತ್ತೆ ಬರುವುದಕ್ಕೆ ಎಸ್ಐಟಿ ಸೂಚಿಸಿತ್ತು. ಅದರಂತೆ ಇಂದು ಬೆಳ್ಳಗೆ 11 ಗಂಟೆಗೆ ಬಂದು ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿಚಾರಣೆ ಎದುರಿಸಿದ್ದಾರೆ.
ಇನ್ನು, ಮನ್ಸೂರ್ ಅಲಿ ಖಾನ್ನನ್ನು ವಶಕ್ಕೆ ಪಡೆಯಲು ಎಸ್ಐಟಿ ತಂಡ ಎಸಿಪಿ ಬಾಲರಾಜು ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಬಾಡಿ ವಾರೆಂಟ್ ಮೂಲಕ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೀಗಾಗಿ ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.