ಬೆಂಗಳೂರು:ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ರಚನೆ ಮಾಡಿ ಸರ್ಕಾರ ಈಗಾಗ್ಲೇ ಆದೇಶ ಹೊರಡಿಸಿದೆ. ಈ ತಂಡದಲ್ಲಿ 11 ಜನ ತನಿಖಾಧಿಕಾಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಇನ್ನು11 ಜನರ ತಂಡವನ್ನು ಎಎಸ್ಐಟಿ ಮುಖ್ಯಸ್ಥರಾಗಿ ಡಿಐಜಿ ರವಿಕಾಂತೇಗೌಡ ನಿರ್ವಹಿಸಲಿದ್ದಾರೆ.
ತಂಡದಲ್ಲಿ ಯಾರೆಲ್ಲ ಇದ್ದಾರೆ :
ಗಿರೀಶ್, ಡಿಸಿಪಿ ಸಿಸಿಬಿ ಕ್ರೈಂ, ಬಾಲರಾಜ್ ಎಸಿಪಿ ಸಿಸಿಬಿ, ರವಿಶಂಕರ್ ಡಿವೈಎಸ್ಪಿ ಸಿಐಡಿ, ರಾಜಾ ಇಮಾಮ್ ಖಾಸಿಂ ಡಿವೈಎಸ್ಪಿ ಇಂಟಲಿಜೆನ್ಸ್, ಅಬ್ದುಲ್ ಖಾದರ್-ಇನ್ಸ್ಪೆಕ್ಟರ್ ಲೋಕಾಯುಕ್ತ, ಸಿ.ಆರ್. ಗೀತ- ಇನ್ಸ್ಪೆಕ್ಟರ್, ಲೋಕಾಯುಕ್ತ, ರಾಜೇಶ್ - ಇನ್ಸ್ಪೆಕ್ಟರ್, ಬಿಡಿಎ ಬೆಂಗಳೂರು, ಅಂಜನ್ ಕುಮಾರ್- ಇನ್ಸ್ಪೆಕ್ಟರ್, ಸಿಸಿಬಿ, ತನ್ಬೀರ್ ಅಹಮದ್- ಇನ್ಸ್ಪೆಕ್ಟರ್, SCRB, ಶೇಖರ್- ಇನ್ಸ್ಪೆಕ್ಟರ್ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇಷ್ಟು ಮಂದಿ ತಂಡದಲ್ಲಿದ್ದು ಪ್ರಕರಣದ ಇಂಚಿಂಚು ಮಾಹಿತಿ ಕಲೆ ಹಾಕಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ 14ಸಾವಿರ ದೂರುಗಳು ದಾಖಲಾಗಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರೆಯಲಿದೆ.