ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ನಿಂದ ತಪ್ಪಿಸಿಕೊಳ್ಳಲು ಖರ್ತನಾಕ್ ಪ್ಲಾನ್: ಅಕ್ರಮವಾಗಿ ಬಂದವರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು - ಬೆಂಗಳೂರು ಲೇಟೆಸ್ಟ್​​ ನ್ಯೂಸ್​

ಕ್ವಾರಂಟೈನ್​ನಿಂದ ತಪ್ಪಿಸಿಕೊಳ್ಳಲು ಕೆಲವರು ಅಕ್ರಮವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಇಂದು ಆಂಧ್ರದಿಂದ ಅಕ್ರಮವಾಗಿ ಹಾಲಿನ ವಾಹನದಲ್ಲಿ ಬಂದಿದ್ದವರನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

Illegal other state people entered city
ಅಕ್ರಮವಾಗಿ ನಗರಕ್ಕೆ ಬಂದವರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

By

Published : May 26, 2020, 11:05 AM IST

Updated : May 26, 2020, 11:49 AM IST

ಬೆಂಗಳೂರು: ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರುವವರನ್ನು ಕ್ವಾರಂಟೈನ್​ ಮಾಡಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಕೆಲವರು ಅಕ್ರಮವಾಗಿ ನಗರವನ್ನು ನುಸುಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಅಕ್ರಮವಾಗಿ ಬಂದವರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಲಾಕ್​ಡೌನ್​ನಿಂದ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಹಾಗೆ ಬಂದವರಿಗೆ ಕ್ವಾರಂಟೈನ್​​ ಕಡ್ಡಾಯ ಮಾಡಲಾಗಿದೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಕೆಲವರು ಅಕ್ರಮವಾಗಿ ನಗರವನ್ನು ಪ್ರವೇಶಿಸುತ್ತಿದ್ದು, ಇಂದು ಆಂಧ್ರದಿಂದ ಅಕ್ರಮವಾಗಿ ಬಂದಿದ್ದವರನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಆಂಧ್ರದಿಂದ ನಗರಕ್ಕೆ ಬರುವ ಹಾಲಿನ ವಾಹನದಲ್ಲಿ ಇಬ್ಬರು ಯುವತಿಯರು ಬೆಂಗಳೂರಿಗೆ ಬಂದಿದ್ದರು. ಮಾಗಡಿ ಚೆಕ್​ ಪೋಸ್ಟ್​ ಬಳಿ ಬರುತ್ತಿದ್ದ ವೇಳೆ ಸ್ಥಳೀಯರು ವಾಹನ ತಡೆದು ವಿಚಾರಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಅವರನ್ನು ಮಾಗಡಿ ಪೊಲೀಸ್​ ಠಾಣೆಗೆ ಕಳುಹಿಸಿದ್ದಾರೆ.

ಹಾಲಿನ ವಾಹನವನ್ನು ಪರಿಶೀಲನೆ ನಡೆಸುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಜನರು ನಗರಕ್ಕೆ ಬರುತ್ತಿರುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.

Last Updated : May 26, 2020, 11:49 AM IST

ABOUT THE AUTHOR

...view details