ಕರ್ನಾಟಕ

karnataka

ETV Bharat / state

ನಮಗೆ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡ್ತೇವೆ: ಸಂಸದ ಮುನಿಸ್ವಾಮಿ - MP Muniswami

ನಾವು ಯಾರನ್ನೂ ನಮ್ಮ ಪಕ್ಷಕ್ಕೆ ಕರೆದಿಲ್ಲ. ಅವರಾಗಿ ಅವರೇ ಜಗಳ ಆಡುತ್ತಿದ್ದಾರೆ. ಅವರಿಗೆ ಸರ್ಕಾರ ನಡೆಸಲು ಆಗುವುದಿಲ್ಲ. ಯಡಿಯೂರಪ್ಪನವರಿಗೆ ಸರ್ಕಾರ ರಚಿಸುವ ಸಾಮರ್ಥ್ಯ ಇದೆ ಹಾಗೂ ಸರ್ಕಾರ ರಚಿಸುವ ಅವಕಾಶ ಅದಾಗಿಯೇ ಹುಡಿಕಿಕೊಂಡು ಬಂದರೆ ನಾವು ರಚಿಸುತ್ತೇವೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ನಮಗೆ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡ್ತೇವೆ: ಸಂಸದ ಮುನಿಸ್ಬಾಮಿ

By

Published : Jul 15, 2019, 5:08 PM IST

ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್​​ಗೆ ಜನರು ಬಹುಮತ ನೀಡಿರಲಿಲ್ಲ. ಜನರೇ ಅವರನ್ನು ತಿರಸ್ಕರಿಸಿದ್ದಾರೆ. ಯಾರಿಗೆ ಬಹುಮತ ಸಿಕ್ಕಿತ್ತೋ ಅವರಿಗೆ ಸರ್ಕಾರ ರಚನೆ ಮಾಡಲು ಬಿಡಬೇಕಿತ್ತು. ಆದ್ರೆ ಜೆಡಿಎಸ್, ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿವೆ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದರು.

ಸಂಸದ ಮುನಿಸ್ಬಾಮಿ

ನಾವು ಯಾರನ್ನೂ ನಮ್ಮ ಪಕ್ಷಕ್ಕೆ ಕರೆದಿಲ್ಲ. ಅವರಾಗಿ ಅವರೇ ಜಗಳ ಆಡುತ್ತಿದ್ದಾರೆ. ಅವರಿಗೆ ಸರ್ಕಾರ ನಡೆಸಲು ಆಗುವುದಿಲ್ಲ. ಯಡಿಯೂರಪ್ಪನವರಿಗೆ ಸರ್ಕಾರ ರಚಿಸುವ ಸಾರ್ಮಾರ್ಥ್ಯ ಇದೆ ಹಾಗೂ ಸರ್ಕಾರ ರಚಿಸುವ ಅವಕಾಶ ಅದಾಗಿಯೇ ಹುಡಿಕಿಕೊಂಡು ಬಂದರೆ ನಾವು ರಚಿಸುತ್ತೇವೆ ಎಂದರು.

ಯಡಿಯೂರಪ್ಪನವರಿಗೆ ಕೊಡುಗೆ:

ಮೋದಿ ಮತ್ತು ಅಮಿತ್​ ಶಾ ಅವರ ಆಡಳಿತ ವೈಖರಿ ನೋಡಿ ನಮ್ಮ ಪಕ್ಷ ಸೇರಲು ಹಲವಾರು ಜನ ಕಾಯುತ್ತಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಬಹಳಷ್ಟು ಮಂದಿ ಕಾಯುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾನು ಅವರನ್ನು ಗೆಲ್ಲಿಸಿ, ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಕೊಡುಗೆ ಕೊಡುತ್ತೇನೆ ಎಂದರು.

ABOUT THE AUTHOR

...view details