ಬೆಂಗಳೂರು:ಪ್ರಸ್ತುತ ಸರ್ಕಾರದಲ್ಲಿ ಆಗುತ್ತಿರುವ ಶೇ 20 ರಷ್ಟು ಕೆಲಸ ಕುಮಾರಣ್ಣನ ಸರ್ಕಾರಾವಧಿಯಲ್ಲಿ ಆಗಿದ್ದಿದ್ದರೆ ನಾನು ಪಕ್ಷ ಬಿಡುತ್ತಿರಲಿಲ್ಲ ಎಂದು ಅನರ್ಹ ಶಾಸಕ ನಾರಾಯಣ ಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಲಿಲ್ಲ. ಅದಕ್ಕಾಗಿಯೇ ನಾವು ಪಕ್ಷ ತೊರೆಯಬೇಕಾಯಿತು. ಆದರೆ ಸಿಎಂ ಯಡಿಯೂರಪ್ಪ ನಮ್ಮ ತಾಲೂಕಿನವರೇ ಆಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ ನಮಗೆ ಸಂತೋಷವಾಗಿದೆ ಎಂದರು.