ಕರ್ನಾಟಕ

karnataka

ETV Bharat / state

ಕೋವಿಡ್ ಸ್ವಾಬ್ ತೆಗೆದ ಐಎಎಸ್​ ಅಧಿಕಾರಿ... ತೀವ್ರ ಟೀಕೆಗೆ ಗುರಿಯಾಯ್ತು ಮನೀಶ್ ಮೌದ್ಗಿಲ್ ನಡೆ - ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್

ಕೋವಿಡ್ ವಾರ್ ರೂಂ ಇನ್​ಚಾರ್ಜ್ ಆಗಿರುವ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಬೆಂಗಳೂರು ನಗರದ ವಿದ್ಯಾಪೀಠ ಹೆಲ್ತ್ ಸೆಂಟರ್​​ನಲ್ಲಿ ಸ್ಬಾಬ್​​ ಟೆಸ್ಟ್​ ಮಾಡಿದ್ದು, ವೈದ್ಯಕೀಯ ವಲಯದಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ias officer made swab test
ಐಎಎಸ್ ಆಫೀಸರ್ ಮನೀಶ್ ಮೌದ್ಗಿಲ್

By

Published : Aug 24, 2020, 10:13 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ‌ ಕಂಟ್ರೋಲ್ ಗೆ ಹೆಚ್ಚು- ಹೆಚ್ಚು ಕೋವಿಡ್ ಟೆಸ್ಟ್​ಗಳನ್ನ ಮಾಡಲಾಗುತ್ತಿದೆ. ಇತ್ತ ಟೆಸ್ಟ್ ಟಾರ್ಗೆಟ್ ಕೊಟ್ಟಿದ್ದಾರೆ ಅಂತ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆ ಕೋವಿಡ್ ಸ್ವಾಬ್ ತೆಗೆದು ತೀವ್ರ ವಿರೋಧಕ್ಕೆ ಗುರಿಯಾಗಿದ್ದಾರೆ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್.

ಅಂದಹಾಗೇ ಕೋವಿಡ್ ವಾರ್ ರೂಂ ಇನ್​ಚಾರ್ಜ್ ಆಗಿರುವ ಮನೀಶ್ ಮೌದ್ಗಿಲ್ ಮೇಲೆ ಸೋಷಿಯಲ್ ಮೀಡಿಯಾ, ವೈದ್ಯಕೀಯ ವಲಯದಲ್ಲಿ ಟೀಕಾ ಪ್ರಹಾರ ಶುರುವಾಗಿದೆ.

ವೈದ್ಯರು ಅಲ್ಲ, ವೈದ್ಯಕೀಯ ಸಿಬ್ಬಂದಿಯೂ ಅಲ್ಲ. ಆದರೂ ಹಿರಿಯ ಐಎಎಸ್ ಆಫೀಸರ್ ಸ್ವಾಬ್ ತೆಗೆದಿದ್ದಾರೆ. ನಗರದ ವಿದ್ಯಾಪೀಠ ಹೆಲ್ತ್ ಸೆಂಟರ್​​ನಲ್ಲಿ ಪಿಪಿಇ ಕಿಟ್ ಧರಿಸಿ ಗಂಟಲು ದ್ರವ(ಸ್ವಾಬ್)ದ ಟೆಸ್ಟ್ ಮಾಡಿದ್ದಾರೆ. ನೀವೇನೂ ಬಯೋಲಜಿ ಸ್ಟೂಡೆಂಟಾ ಅಂತ ಪ್ರಶ್ನಿಸಿರುವ ವೈದ್ಯರು, ಸಾರ್ವಜನಿಕ ಸ್ಥಳದಲ್ಲಿ ಸ್ಯಾಂಪಲ್ ತೆಗೆಯಲು ಯಾರು ನಿಮ್ಗೆ ಅನುಮತಿ ನೀಡಿದ್ದು? ಅದೂ ತರಬೇತಿ ಇಲ್ಲದೇ ಇದ್ದರೂ... ಅಂತ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

‌ಸರಿಯಾದ ರೀತಿಯಲ್ಲಿ ಸ್ವಾಬ್ ತೆಗೆಯದೇ ಇರೋದು ವಿಡಿಯೋದಲ್ಲೇ ಬಹಿರಂಗವಾಗಿದೆ. ನೀವಷ್ಟೇ ಪಿಪಿಇ ಕಿಟ್ ಧರಿಸಿದ್ದೀರಾ? ನಿಮ್ಮ ಅಕ್ಕಪಕ್ಕ ಇರೋ ಆರೋಗ್ಯಾಧಿಕಾರಿಗಳು ಸರಿಯಾಗಿ ಪಿಪಿಇ ಕಿಟ್ ಹಾಕಿಲ್ಲ, ಕೈಗವಸು ಸಹ ಹಾಕಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ.

ABOUT THE AUTHOR

...view details