ಕರ್ನಾಟಕ

karnataka

ETV Bharat / state

ಬಿಜೆಪಿ ಸೇರಲ್ಲ, ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೇನೆ: ಎಂಟಿಬಿ - ಅನರ್ಹ ಶಾಸಕ ಎಂಟಿಬಿ ನಾಗರಾಜ್

ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಬಿ.ಎಸ್​​. ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್​​, ನಮ್ಮ ಸಂಸ್ಥೆಯ ಮೂಲಕ ನೆರೆ ಸಂತ್ರಸ್ತರಿಗೆ ಒಂದು ಕೋಟಿ ರೂಪಾಯಿ ಪರಿಹಾರದ ಚೆಕ್​​ ನೀಡಿದ್ದೇವೆ. ಹಾಗೂ ಬಿಜೆಪಿಗೆ ಸೇರುವ ಕುರಿತು ಯೋಚಿಸಿಲ್ಲ. ನಾನು ರಾಜಕೀಯ ನಿವೃತ್ತಿ ಪಡೆಯುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್

By

Published : Aug 14, 2019, 4:11 PM IST

ಬೆಂಗಳೂರು:ಈ ಹಿಂದೆಯೇ ಘೋಷಿಸಿದಂತೆ ಎಂಟಿಬಿ ಸಂಸ್ಥೆಯ ಮೂಲಕ ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ಸಿಎಂ ಬಿಎಸ್​​ವೈ ಅವರನ್ನು ಭೇಟಿ ಮಾಡಿದೆ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಬಿಎಸ್​​ವೈ ಭೇಟಿ ಬಳಿಕ ಮಾತನಾಡಿ, ಎಂಟಿಬಿ ಸಂಸ್ಥೆಯ ಮೂಲಕ ಒಂದು ಕೋಟಿ ರೂಪಾಯಿ ಪರಿಹಾರ ಚೆಕ್ ನೀಡಲು ನಿರ್ಧರಿಸಿ ನಿನ್ನೆ ಘೋಷಣೆ ಮಾಡಿದ್ದೆ. ಇಂದು ಚೆಕ್ ಹಸ್ತಾಂತರಿಸಿದ್ದೇನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯಲ್ಲಿ ಆಸ್ತಿ ಹಾಗೂ ಮನೆ ಕಳೆದುಕೊಂಡವರಿಗೆ ನಮ್ಮ ಕಡೆಯಿಂದ ಒಂದು ಸಣ್ಣ ಸಹಾಯ ಮಾಡಿದ್ದೇನೆ ಎಂದರು.

ಟೆಲಿಫೋನ್ ಕದ್ದಾಲಿಕೆ:

ನನ್ನ ಟೆಲಿಫೋನ್ ಕದ್ದಾಲಿಕೆ ಕೂಡ ಆಗಿದೆ ಎನ್ನುವುದು ಗೊತ್ತಾಗಿದೆ.ಯಾರೇ ಮುಖ್ಯಮಂತ್ರಿ, ಸಚಿವ ಆಗಲಿ ಹೀಗೆ ಮಾಡಬಾರದು. ಮಾಡಿದ್ದರೆ ಅದಕ್ಕೆ ಸೂಕ್ತ ತನಿಖೆ ಆಗಿ ಕ್ರಮ ಆಗಬೇಕು. ಮೊದಲಿಗೆ ನಮಗೆ ಅನುಮಾನ ಬಂದಿತ್ತು. ಹಾಗಾಗಿ ಫೋನ್ ಆಫ್ ಮಾಡಿಟ್ಟುಕೊಂಡಿದ್ದೆವು. ನಮಗೆ ಬಂದ ಅನುಮಾನ ಇಂದು ಬಹಿರಂಗವಾಗಿದೆ. ಅದರ ಬಗ್ಗೆ ದೊಡ್ಡ ತನಿಖೆ ನಡೆಯಬೇಕು ಎಂದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್

ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೇನೆ:

ನಾವಿನ್ನೂ ಅನರ್ಹ ಶಾಸಕರಾಗಿಯೇ ಇರುವುದರಿಂದ ಸಚಿವ ಸಂಪುಟ ಸೇರುವ ಚರ್ಚೆ ಆಗಿಲ್ಲ. ಬಿಜೆಪಿ ಸೇರುವ ಬಗ್ಗೆ ಚರ್ಚೆಯಾಗಿಲ್ಲ. ನಾವೆಲ್ಲ ಸೇರಿ ಮುಂದೆ ತೀರ್ಮಾನಿಸುತ್ತೇವೆ. ಕೋರ್ಟ್ ಆದೇಶ ಬೇರೆ ಆಗಬೇಕಿದೆ. ನಾನು ಬಿಜೆಪಿಗೆ ಹೋಗುವ ಅನಿಸಿಕೆಯಿಲ್ಲ. ನಾನು ನಿವೃತ್ತಿ ಪಡೆಯಲು ಚಿಂತಿಸಿದ್ದೇನೆ.

ಹೊಸ ಕಾರು ಖರೀದಿ:

ರೋಲ್ಸ್ ರಾಯ್ಸ್ ಕಾರು ಖರೀದಿ ವಿಚಾರ ಮಾತನಾಡಿ, ನನಗೆ ಕಾರು ಖರೀದಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಇದೀಗ ಆಸೆ ಕೈಕೂಡಿದೆ. ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದೇನೆ ಎಂದರು.

ABOUT THE AUTHOR

...view details