ಬೆಂಗಳೂರು:ಡಿಸಿಎಂ ಹುದ್ದೆಯನ್ನು ಬಯಸಿರಲಿಲ್ಲ ,ನನಗೆ ಈ ಬಗ್ಗೆ ಗೊತ್ತಿರಲಿಲ್ಲ ,ನನ್ನ ಪಕ್ಷದ ಮುಖಂಡರು , ಸಿಎಂ ಬಿಎಸ್ ವೈ ನನಗೆ ಆಶೀರ್ವಾದ ಮಾಡಿದ್ದಾರೆ. ನನಗಾಗಿ ಈ ಸ್ಥಾನ ಅಲ್ಲ. ಈ ನಾಡಿನ ಯುವಕರು, ನಾಡಿನ ಜನತೆಗಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ನಾಡಿನ ಜನತೆಗಾಗಿ ಕೆಲಸ ಮಾಡುತ್ತೇನೆ: ಡಿಸಿಎಂ ಅಶ್ವತ್ಥನಾರಾಯಣ - ಸಿಎಂ ಬಿಎಸ್ ವೈ
ಡಿಸಿಎಂ ಹುದ್ದೆಯನ್ನು ಬಯಸಿರಲಿಲ್ಲ ,ನನಗೆ ಈ ಬಗ್ಗೆ ಗೊತ್ತಿರಲಿಲ್ಲ ,ನನ್ನ ಪಕ್ಷದ ಮುಖಂಡರು , ಸಿಎಂ ಬಿಎಸ್ ವೈ ನನಗೆ ಆಶೀರ್ವಾದ ಮಾಡಿದ್ದಾರೆ. ನನಗಾಗಿ ಈ ಸ್ಥಾನ ಅಲ್ಲ. ಈ ನಾಡಿನ ಯುವಕರು, ನಾಡಿನ ಜನತೆಗಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ನಾಡಿನ ಜನತೆಗಾಗಿ ಕೆಲಸ ಮಾಡುತ್ತೇನೆ: ಡಿಸಿಎಂ ಅಶ್ವತ್ಥನಾರಾಯಣ
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇನ್ನು ಸಾಕಷ್ಟು ಕೆಲಸ ಆಗಬೇಕಿದೆ .ಬೆಂಗಳೂರಿನ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಪ್ರಾಮಾಣಿಕವಾಗಿ ನಿರ್ದಿಷ್ಟ ಸಮಯದಲ್ಲಿ ಮಾಡುತ್ತೇವೆ. ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ, ಯಾವುದೇ ವ್ಯತ್ಯಾಸಕ್ಕೆ ಅವಕಾಶವಾಗದಂತೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾರೂ ಕೂಡಾ ಮುನಿಸಿಕೊಂಡಿಲ್ಲ, ಹೀಗೆ ತಪ್ಪಾಗಿ ಬಿಂಬಿಸಲಾಗಿದೆ. ನಾವೆಲ್ಲರೂ ಸಮಾಜಕ್ಕೆ ಸೇವೆ ಮಾಡಲು ಕಟಿಬದ್ಧರಾಗಿದ್ದೇವೆ ಎಂದರು.