ಕರ್ನಾಟಕ

karnataka

ETV Bharat / state

ಸಿಸಿಬಿ ವಿಚಾರಣೆಗೆ ಹಾಜರಾಗಿ ಸಹಕರಿಸುತ್ತೇನೆ: ನಿರೂಪಕಿ ಅನುಶ್ರೀ - mangalore ccb inquiry news

ಸ್ಯಾಂಡಲ್​​ವುಡ್​​ಗೆ ಡ್ರಗ್ಸ್​​ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತಮ್ಮ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಡ್ರಗ್ಸ್​​ ಜಾಲ ಸಂಬಂಧ ಡ್ಯಾನ್ಸರ್ ಸೇರಿದಂತೆ ಹಲವರನ್ನು ಬಂಧಿಸಿದ್ರು. ಬಂಧಿತರ ಜೊತೆ ಸಂಪರ್ಕ ಇರುವ ಕಾರಣ ಅನುಶ್ರೀಗೂ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಲಾಗಿದೆ. ಹಾಗಾಗಿ ಇಂದು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ.

I will attend the CCB inquiry : Anushri
ಸಿಸಿಬಿ ವಿಚಾರಣೆಗೆ ಹಾಜರಾಗಿ ಸಹಕರಿಸುತ್ತೇನೆ: ನಿರೂಪಕಿ ಅನುಶ್ರೀ ಸ್ಪಷ್ಟನೆ

By

Published : Sep 25, 2020, 7:06 AM IST

Updated : Sep 25, 2020, 7:11 AM IST

ಬೆಂಗಳೂರು: ಸ್ಯಾಂಡಲ್​ವುಡ್​​ಗೆ​ ಡ್ರಗ್ಸ್​​ ಮಾಫಿಯಾ ನಂಟು ಆರೋಪ​ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಿರೂಪಕಿ ಅನುಶ್ರೀ ಹೆಸರು ಸದ್ದು ಮಾಡುತ್ತಿದ್ದು, ಮಂಗಳೂರು ಸಿಸಿಬಿ ವಿಚಾರಣೆಗೆ ತಾನೇ ಹಾಜರಾಗುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ

ತಡರಾತ್ರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅನುಶ್ರೀ, ಮಂಗಳೂರಿನ ಸಿಸಿಬಿ ಕಚೇರಿಯಿಂದ ಸಂಜೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ ‌ಮಾಡಿದ್ದಾರೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ ತಾನೇ ಸ್ವತಃ ಮಂಗಳೂರಿಗೆ ತೆರಳಿ ಖುದ್ದಾಗಿ ವಿಚಾರಣೆಗೆ ಹಾಜರಾಗಲಿದ್ದೇನೆ. ಕೇವಲ ವಿಚಾರಣೆಗೆ ಕರೆದಿದ್ದು, ನಾನು ವಿಚಾರಣೆ ಎಸುರಿಸುತ್ತೇನೆಂದು ತಿಳಿಸಿದ್ದಾರೆ.

ಅನುಶ್ರೀಗೂ ನೋಟಿಸ್: ಶನಿವಾರ ವಿಚಾರಣೆಗೆ ಹಾಜರಾಗಲು ಸೂಚನೆ

ಕೆಲವೊಂದು ಕಡೆ ನಾನು ನಟಿಸಿದ ಚಿತ್ರವೊಂದನ್ನು ತೋರಿಸಿ ನನ್ನನ್ನು ಅಪರಾಧಿ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಈ ಡ್ರಗ್ಸ್​​ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ವಿಚಾರಣೆಗೆಂದು ಕರೆದ ಕೂಡಲೇ ನಾನು ಅಪರಾಧಿಯಾಗುವುದಿಲ್ಲ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇನೆ. ಈ ಪ್ರಕರಣದ ತನಿಖೆ ನಡೆಯುವಾಗ ಇಲ್ಲ ಸಲ್ಲದ ಆರೋಪ‌ ಮಾಡಬೇಡಿ. ಕುಟುಂಬಸ್ಥರಿಗೆ ಈಗಾಗಲೇ ನೊವು ತಂದಿದೆ. ಅತಿಯಾದ ಪ್ರಚಾರ ಸತ್ಯದ ವಿಚಾರವನ್ನು ದಾರಿ ತಪ್ಪಿಸಿದಂತಾಗುತ್ತದೆ. ನಾನು ವಿಚಾರಣೆ ಎದುರಿಸಿದ ಬಳಿಕ ಮಾತಾನಾಡುವುದಾಗಿ ತಿಳಿಸಿದ್ದಾರೆ.

Last Updated : Sep 25, 2020, 7:11 AM IST

ABOUT THE AUTHOR

...view details