ಬೆಂಗಳೂರು:ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದ ಹಿರಿಯರು, ನಗರದ ಶಾಸಕರಿಗೆ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಆರ್ ಎಸ್ ಸತ್ಯನಾರಾಯಣ ಧನ್ಯವಾದ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ಆಡಳಿತ ನಡೆಸಿ ಐದನೇ ಬಾರಿಗೆ ನನ್ನನ್ನ ಆಯ್ಕೆ ಮಾಡಿದ್ದಕ್ಕೆ ಸಂತಸವಾಗಿದೆ ಎಂದರು.
ಕಾಂಗ್ರೆಸ್ನಿಂದ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ: ಪಕ್ಷಕ್ಕೆ ಸತ್ಯನಾರಾಯಣ ಧನ್ಯವಾದ - Satyanarayana
ಇಂದು ಬಿಬಿಎಂಪಿ ಮೇಯರ್, ಉಪಮೇಯರ್ ಜೊತೆಗೆ 4 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಮೇಯರ್ ಅಭ್ಯರ್ಥಿಯಾಗಿ ಆರ್ ಎಸ್ ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಿದೆ.
ಪಕ್ಷದ ವಿಪ್ ಉಲ್ಲಂಘಿಸಿ ಮತದಾನಕ್ಕೆ ಗೈರು ಹಾಜರಾದರೆ ಕಾನೂನು ಕ್ರಮ: ಅಬ್ದುಲ್ ವಾಜಿದ್
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು, ನಮ್ಮ ಪ್ರಕಾರ ಯಾರೂ ಚುನಾವಣೆ ವೇಳೆ ಗೈರಾಗುವುದಿಲ್ಲ. ಒಂದು ವೇಳೆ ಗೈರಾದರೂ ಅಂತಹ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾ ಆಯುಕ್ತರಿಗೆ ದೂರು ನೀಡುತ್ತೇವೆ. ಸರ್ಕಾರ ಮುಂದೂಡಲು ಯತ್ನಿಸಿದ ಚುನಾವಣೆಯನ್ನು ಕಾನೂನು ಪ್ರಕಾರ ಇಂದೇ ನಡೆಸಲು ಆಯುಕ್ತ ಹರ್ಷ ಗುಪ್ತಾ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ಮುಖಭಂಗವಾಗಿದೆ. ಪಕ್ಷ ನೀಡಿರುವ ವಿಪ್ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.