ಕರ್ನಾಟಕ

karnataka

ETV Bharat / state

ಪತ್ನಿ ಕೊಂದು ನೇಣಿಗೆ ಶರಣಾದ ಪತಿ: ಕೌಟುಂಬಿಕ ಕಲಹಕ್ಕೆ ದಂಪತಿ ಬಲಿ - ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್​ ಮದ್ಯ ವ್ಯಸನಿಯಾಗಿದ್ದ. ಪ್ರತಿನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದನಂತೆ. ನಿನ್ನೆ ಮಧ್ಯಾಹ್ನವೂ ಸಹ ಇಬ್ಬರ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದೆ ಎಂದು ತಿಳಿಬಂದಿದೆ.

husband-commits-suicide-after-kills-his-wife-in-bangalore
ಕೌಟುಂಬಿಕ ಕಲಹಕ್ಕೆ ದಂಪತಿ ಬಲಿ..ಪತ್ನಿ ಕೊಂದು ನೇಣಿಗೆ ಶರಣಾದ ಪತಿ

By

Published : Oct 18, 2021, 12:16 PM IST

ಬೆಂಗಳೂರು: ಮನೆಯೊಂದರಲ್ಲಿ ಪತ್ನಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಹಾಗೂ ಪತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ.

ಕನಕಪುರದ ಮಂಜುನಾಥ್, ಮಳವಳ್ಳಿ ರೋಜಾ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಕಾರಣ ಪತಿಯೇ ಪತ್ನಿಯ ಕೊಲೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್​ ಮದ್ಯ ವ್ಯಸನಿಯಾಗಿದ್ದ. ಪ್ರತಿನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದನಂತೆ. ನಿನ್ನೆ ಮಧ್ಯಾಹ್ನವೂ ಸಹ ಇಬ್ಬರ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತ್ನಿಯ ಕೊಲೆಗೈದು ತಾನೂ ಫ್ಯಾನ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಬಂದಿದೆ.

ಗಲಾಟೆಯ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಒಳಹೊಕ್ಕಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ರಕ್ತ ಚೆಲ್ಲಿದ್ದು, ಪತಿಯೇ ಪತ್ನಿಯನ್ನು ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೂ ಓದಿ:ತ್ರಿಕೋನ ಪ್ರೇಮ ಕಥೆ.. ಆತ್ಮಹತ್ಯೆಗೆ ಶರಣಾದ ಭಗ್ನಪ್ರೇಮಿ..

ABOUT THE AUTHOR

...view details