ಬೆಂಗಳೂರು: ಮೆಟ್ರೋ ಹಳಿಗೆ ಇಳಿದ ಮೇಲೆ ಬಿಎಂಟಿಸಿಗೆ ಪ್ರಯಾಣಿಕರ ಅಭಾವ ಎದುರಾಗಿದೆ. ಹೀಗಾಗಿ ಆದಾಯದ ಕೊರತೆಯೂ ದಿನದಿಂದ ದಿನಕ್ಕೆ ಹೆಚ್ಚಾಗ್ತನೇ ಸಾಗಿದೆ. ಇದಕ್ಕೆ ಹೊಸ ಆದಾಯದ ಮೂಲ ಹುಡುಕಲು ಹೊರಟ ಬಿಎಂಟಿಸಿ ಮೆಟ್ರೋಗೆ ಫೀಡರ್ ಬಸ್ ಸೇವೆ ಆರಂಭಿಸಿತು. ಆದರೆ, ಈ ಫೀಡರ್ ಸಹ ಈಗ ಬಿಎಂಟಿಸಿ ನಷ್ಟವನ್ನು ಉಂಟು ಮಾಡುತ್ತಿದೆ ಎನ್ನುವ ಮಾಹಿತಿ ದೊರೆತಿದೆ.
ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸುತ್ತಿದೆ. ಇದಕ್ಕಾಗಿ ಬಿಎಂಟಿಸಿ 500 ಬಸ್‌ಗಳನ್ನು ಕೊಂಡುಕೊಂಡಿತ್ತು. ಅವೆಲ್ಲಾ ಕೈಕೊಡ್ತಿರೋ ಕಾರಣ ಇತರೆ ಬಸ್‌ಗಳನ್ನೂ ಸಹ ಮೆಟ್ರೋಗೆ ಫೀಡರ್ ಬಸ್ ಸೇವೆ ನೀಡಲು ನಿಯೋಜಿಸುತ್ತಿದೆ. ಆದರೆ, ಈ ಫೀಡರ್ ಸರ್ವಿಸ್‌ನಿಂದ ಬಿಎಂಟಿಸಿಗೆ ನಿಗದಿತ ಆದಾಯ ಬರುತ್ತಿಲ್ಲ. ಲಾಸ್ ಮೇಲೆ ಲಾಸ್ ಆಗುತ್ತಿದೆ ಎನ್ನುವುದು ಬಿಎಂಟಿಸಿ ಆರೋಪ. ನಮಗೆ ಆರ್ಥಿಕ ಶಕ್ತಿ ನೀಡಿದರೆ ಮಾತ್ರ ಫೀಡರ್ ಸೇವೆ ನೀಡಲು ಸಾಧ್ಯ ಎನ್ನುವುದು ಬಿಎಂಟಿಸಿ ವಾದ.