ಕರ್ನಾಟಕ

karnataka

ಬೆಂಗಳೂರಲ್ಲಿ ಭಾರೀ ಮಳೆಯಿಂದ ಹಲವೆಡೆ ಅವಾಂತರ: ಶುಚಿತ್ವಕ್ಕೆ ಮುಂದಾದ ಪೌರಕಾರ್ಮಿಕರು

By

Published : Oct 24, 2020, 10:30 AM IST

Updated : Oct 24, 2020, 11:00 AM IST

ಭಾರೀ ಮಳೆಯಿಂದ ಹೊಸಕೆರೆಹಳ್ಳಿ ಪ್ರದೇಶ ಸಂಪೂರ್ಣ ಜಲಾವೃತವಾಗಿತ್ತು. ಇದರಿಂದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಗಿದ್ದು, ಇಂದು ಪೌರಕಾರ್ಮಿಕರು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

hosakerehalli-rain-team-of-civic-workers-started-cleaning-work
ಹೊಸಕರೆಹಳ್ಳಿಯಲ್ಲಿ ಮಳೆ ಹಾನಿ: ಶುಚ್ಚಿತ್ವಕ್ಕೆ ಮುಂದಾದ ಪೌರಕಾರ್ಮಿಕರ ತಂಡ

ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವು ಏರಿಯಾಗಳು ಸಣ್ಣ ದ್ವೀಪಗಳಾಗಿ ಮಾರ್ಪಟ್ಟಿವೆ. ಮಳೆಯಾಗಿರುವ ಪ್ರದೇಶದಲ್ಲಿ ಪಾಲಿಕೆಯ ಪೌರಕಾರ್ಮಿಕರು ಶುಚಿತ್ವಕ್ಕೆ ಮುಂದಾಗಿದ್ದಾರೆ. ರಾಜಕಾಲುವೆ ಕಾಮಗಾರಿ ಹಿನ್ನೆಲೆ ಮಣ್ಣು ತೆಗೆದಿದ್ದ ಸ್ಥಳದಲ್ಲಿ ನೀರು ನುಗ್ಗಿದ್ದು, ಇದರಿಂದ ಮನೆಗಳಿಗೆ ಮಣ್ಣು ಮಿಶ್ರಿತ ನೀರು ನುಗ್ಗಿ ಹಾನಿಯಾಗಿದೆ.

ಇತ್ತ ಹೊಸಕರೆಹಳ್ಳಿಯ ದತ್ತಾತ್ರೇಯ ಸ್ವಾಮಿ ದೇವಾಲಯ ಸಂಪೂರ್ಣ ಮುಳುಗಡೆಯಾದ ಕಾರಣ ದವಸ ಧಾನ್ಯ ಎಲ್ಲವೂ ನೀರುಪಾಲಾಗಿದೆ. ಜೊತೆಗೆ ಸಿಬ್ಬಂದಿ ವಿಗ್ರಹಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದತ್ತಪೀಠದ ಗನನ ಗುರುದತ್ತ ಗುರೂಜಿ, ಮಠಕ್ಕೆ ನೀರು ನುಗ್ಗಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ನೀರುಪಾಲಾಗಿವೆ. ಎರಡು ವರ್ಷದ ಹಿಂದೆ ಕೂಡ ಇದೇ ರೀತಿ ಆಗಿತ್ತು. ರಾಜಕಾಲುವೆ ಒಡೆದು ನೀರು ಉಕ್ಕಿ ದೇವಸ್ಥಾನಕ್ಕೆ ನುಗ್ಗಿತ್ತು. ದೇವಾಲಯದೊಳಗೂ ಹಾನಿಯಾಗಿದೆ ಎಂದಿದ್ದಾರೆ.

ಮಳೆಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ
ಹೊಸಕೆರೆಹಳ್ಳಿ ಮಳೆ ಹಾನಿ ಪ್ರದೇಶಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಇತ್ತ ಸ್ಥಳಕ್ಕೆ ಕಂದಾಯ ಸಚಿವ ಆರ್.ಅಶೋಕ್ ಕೂಡ ಭೇಟಿ ನೀಡಲಿದ್ದಾರೆ. ಸ್ವಚ್ಛತಾ ಕಾರ್ಯ ಹಾಗೂ ಪರಿಹಾರ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಬಿಎಂಟಿಸಿ ಬಸ್ ಡಿಪೋ ಜಲಾವೃತ

ನಿನ್ನೆ ಸುರಿದ ಧಾರಾಕಾರ ಮಳೆ ಹಿನ್ನೆಲೆ ಶಾಂತಿನಗರ ಬಿಎಂಟಿಸಿ ಬಸ್ ಡಿಪೋ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಳೆದ 6 ವರ್ಷಗಳಿಂದ ಇದೇ ಪರಿಸ್ಥಿತಿಯಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಸುಮಾರು ನಾಲ್ಕರಿಂದ ಐದು ಅಡಿಯಷ್ಟು ನೀರು ನಿಲ್ಲುತ್ತಿದೆ. ಜಲಾವೃತವಾಗಿರೋ ರಸ್ತೆಗಳಲ್ಲೇ ಬಸ್​​ಗಳು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ.

Last Updated : Oct 24, 2020, 11:00 AM IST

ABOUT THE AUTHOR

...view details