ಕರ್ನಾಟಕ

karnataka

ETV Bharat / state

ದೇಶ ವಿರೋಧಿ ಹೇಳಿಕೆ ನೀಡಿದ ಪಿಎಫ್​ಐ ಮುಖಂಡರ ವಿರುದ್ಧ ಕ್ರಮ: ಗೃಹ ಸಚಿವ ಬೊಮ್ಮಾಯಿ

ದೇಶದ ಜನತೆಯನ್ನು ಒಡೆಯುವ ಪ್ರಯತ್ನದ ಹೇಳಿಕೆ ಅದಾಗಿದೆ. ಪಿಎಫ್​ಐ ಸಂಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Home minister Bommai reaction about PFI statement in Ullal news
ಗೃಹ ಸಚಿವ ಬೊಮ್ಮಾಯಿ ಹೇಳಿಕೆ

By

Published : Feb 19, 2021, 2:59 PM IST

ಬೆಂಗಳೂರು:ಉಲ್ಲಾಳದಲ್ಲಿ ಪಿಎಫ್​ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕವಾದದ್ದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬೊಮ್ಮಾಯಿ

ವಿಧಾನಸೌಧದಲ್ಲಿ ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಿಎಫ್​ಐ ಸಂಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗುವುದು. ದೇಶದ ಜನತೆಯನ್ನು ಒಡೆಯುವ ಪ್ರಯತ್ನದ ಹೇಳಿಕೆ ಅದಾಗಿದೆ. ಆರ್​ಎಸ್​ಎಸ್ ಸಂಘಟನೆ ಒಂದು ದೇಶಭಕ್ತಿಯ ಪ್ರತೀಕ. ರಾಮ ಮಂದಿರ ನಿರ್ಮಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಬಗ್ಗೆ ಪಿಎಫ್​ಐ ನಾಯಕರು ಮಾತನಾಡಿರುವುದು ಆಕ್ಷೇಪಾರ್ಹ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯಕ್ಕೆ ಕೇರಳ - ಮಹಾರಾಷ್ಟ್ರದಿಂದ ಕೋವಿಡ್ ಹಬ್ಬುವ ಆತಂಕ; ಮುನ್ನೆಚ್ಚರಿಕೆ

ಆ ಸಂಘಟನೆ ತನ್ನ ನಿಜವಾದ ಬಣ್ಣವನ್ನು ಹಲವು ಬಾರಿ ತೋರಿಸಿದೆ. ದೇಶ ವಿರೋಧಿ ಹೇಳಿಕೆ ನೀಡಿರುವ ಪಿಎಫ್​ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details