ಕರ್ನಾಟಕ

karnataka

ETV Bharat / state

ಗುಣಮುಖರಾದವರನ್ನು ಕರೆತಂದಿದ್ದಕ್ಕೆ ಆಕ್ಷೇಪ.. ಜನ ಮನುಷ್ಯತ್ವ ಕಳ್ಕೊಂಡರಾ?

ಕೊರೊನಾದಿಂದ ಗುಣಮುಖರಾದವರ ಬಗ್ಗೆ ಬಿಬಿಎಂಪಿಗೆ ಯಾವುದೇ ಮಾಹಿತಿ ನೀಡದೆ ಆರೋಗ್ಯ ಇಲಾಖೆ ಹೊಂಗಸಂದ್ರಕ್ಕೆ ಏಕಾಏಕಿ ಕರೆತಂದಿದೆ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

hogasandhra-corona-patients-discharge
ಸ್ಥಳೀಯರ ವಿರೋಧ

By

Published : May 8, 2020, 1:24 PM IST

Updated : May 8, 2020, 2:07 PM IST

ಬೆಂಗಳೂರು :ಸಾಕಷ್ಟು ಆತಂಕ‌ ಮೂಡಿಸಿರುವ ಕೊರೊನಾ ಪಾಸಿಟಿವ್​ ಪ್ರಕರಣಗಳ ಏರಿಕೆ ನಡುವೆ ಹೊಂಗಸಂದ್ರದ ಐವರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಗುಣಮುಖರಾಗಿ ಬಂದವರ ಬಗ್ಗೆ ಸ್ಥಳೀಯರಿಂದ ಆಕ್ಷೇಪ..
ಈ ಹಿನ್ನೆಲೆ ಆರೋಗ್ಯ ಇಲಾಖೆಯವರು ಅವರನ್ನು ನಿನ್ನೆ ರಾತ್ರಿ ಹೊಂಗಸಂದ್ರಕ್ಕೆ ಕರೆತಂದಿದ್ದಾರೆ. ಆದರೆ, ಇವರನ್ನು ಕರೆತಂದಿದ್ದಕ್ಕೆ ಮನೆ ಮಾಲೀಕರು ಸೇರಿದಂತೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ‌‌. ಕೊರೊನಾದಿಂದ ಗುಣಮುಖರಾದವರ ಬಗ್ಗೆ ಬಿಬಿಎಂಪಿಗೆ ಯಾವುದೇ ಮಾಹಿತಿ ನೀಡದೆ ಆರೋಗ್ಯ ಇಲಾಖೆ ಹೊಂಗಸಂದ್ರಕ್ಕೆ ಏಕಾಏಕಿ ಕರೆತಂದಿದೆ ಎಂದು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಗುಣಮುಖರಾಗಿರುವ ಈ ಐವರನ್ನೂ ಹೋಟೆಲ್‌ನಲ್ಲಿರಿಸಲಾಗಿದೆ. ‌ಪರಿಸ್ಥಿತಿ ಹೀಗಿರುವ ಕಾರಣ ಕೊರೊನಾ ‌ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಕೊರೊನಾದಿಂದ ಗುಣಮುಖರಾಗಿ ಬಂದವರನ್ನು ಸಾಮಾನ್ಯರಂತೆ ಕಾಣಬೇಕಾಗಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
Last Updated : May 8, 2020, 2:07 PM IST

ABOUT THE AUTHOR

...view details