ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ, ಮುಂದೆ ಅದು ಇನ್ನಷ್ಟು ಹೆಚ್ಚಲಿದೆ: ಎಚ್.ಎಂ. ರೇವಣ್ಣ

ಡಿಸಿಎಂ ವಿಚಾರಕ್ಕೆ ಬಿಜೆಪಿಯಲ್ಲಿ ಸದ್ಯ ಬೆಂಕಿ ಬಿದ್ದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಲಿದೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

H.M. Revanna
ಎಚ್.ಎಂ. ರೇವಣ್ಣ

By

Published : Dec 17, 2019, 4:40 PM IST

ಬೆಂಗಳೂರು:ಡಿಸಿಎಂ ವಿಚಾರಕ್ಕೆ ಬಿಜೆಪಿಯಲ್ಲಿ ಸದ್ಯ ಬೆಂಕಿ ಬಿದ್ದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಲಿದೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ವಾಪಸ್ ತೆರಳುವ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟವಾಗಿದೆ. ಉಮೇಶ್ ಕತ್ತಿ ಈಗಾಗಲೇ ಕತ್ತಿ ಮಸೆಯುತ್ತಿದ್ದಾರೆ. ಶ್ರೀರಾಮುಲು ಕ್ಯಾಬಿನೆಟ್ ಸೇರಿದಂತೆ ಯಾವ ಸಭೆಗೂ ಹೋಗುತ್ತಿಲ್ಲ. ಇವರ ಕಥೆ ಇದಾದರೆ, ಇದೀಗ ಶಾಸಕರಾಗಿ ಆಯ್ಕೆಯಾಗಿರುವವರು ಅಧಿಕಾರ ಬೇಕು ಅಂತಾ ಅವರೆಲ್ಲ ಹೋಗಿದ್ದಾರೆ. ಅಧಿಕಾರ ಸಿಗದಿದ್ರೆ ಮತ್ತೆ ಅವರ ಕೆಲಸ ಅವರು ಪ್ರಾರಂಭ ಮಾಡುತ್ತಾರೆ. ಹಳಬರಿಗೆ ಅವಕಾಶ ಮಾಡಕೊಂಡಬೇಕೆಂದು ಸಂತೋಷ್ ಹೇಳಿದ್ದಾರೆ. ತಕ್ಷಣಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಎಚ್.ಎಂ. ರೇವಣ್ಣ

ಜನರ ಅಭಿಪ್ರಾಯಕ್ಕೆ ನಾವು ಮನ್ನಣೆ ಕೊಡುತ್ತೇವೆ. ವಿರೋಧ ಪಕ್ಷ ಮಾಡುವ ಕೆಲಸ ನಾವು ಮಾಡುತ್ತೇವೆ. ತಕ್ಷಣಕ್ಕೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದರು.

ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ:

ಸಿದ್ದರಾಮಯ್ಯ ಆರೋಗ್ಯವಾಗಿದ್ದು, ಲವಲವಿಕೆಯಿಂದಿದ್ದಾರೆ. ಎಲ್ಲರನ್ನೂ ಮಾತನಾಡಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅವರ ಭೇಟಿಗೆ ಜನ ಬರುತ್ತಿದ್ದಾರೆ. ಎಷ್ಟು ಅಗತ್ಯವೋ ಅಷ್ಟು ಮಾತನಾಡುತ್ತಿದ್ದಾರೆ. ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿದ್ದಾರೆ. ಒತ್ತಡ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದಾರೆ ಎಂದರು.

ABOUT THE AUTHOR

...view details