ಕರ್ನಾಟಕ

karnataka

ಹಿಟ್​ ಆ್ಯಂಡ್​ ರನ್​ಗೆ ಸ್ವಿಗ್ಗಿ ಬಾಯ್ಸ್​ ಬಲಿ​​: ಎದೆ ಝಲ್​ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Feb 24, 2021, 10:09 AM IST

Updated : Feb 24, 2021, 12:29 PM IST

ಬೆಂಗಳೂರಿನಲ್ಲಿ ನಡೆದ ಹಿಟ್​ ಆ್ಯಂಡ್​ ರನ್​ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅಪಘಾತದ ಎದೆ ಝಲ್​ ಎನ್ನುವ ದೃಶ್ಯ ಹತ್ತಿರದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Hit and run in Bangalore
ಹಿಂಟ್​ ಆ್ಯಂಡ್​ ರನ್​ಗೆ ಸ್ವಿಗ್ಗಿ ಬಾಯ್ಸ್​ ಬಲಿ

ಬೆಂಗಳೂರು:ನಗರದಲ್ಲಿ ಹಿಟ್ ಆ್ಯಂಡ್​ ರನ್ ಅಪಘಾತಕ್ಕೆ‌ ಇಬ್ಬರು ವಾಹನ ಸವಾರರು ಬಲಿಯಾಗಿದ್ದಾರೆ‌. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತುಮಕೂರು ಮುಖ್ಯರಸ್ತೆ ಕಡೆ ಬರುತ್ತಿದ್ದ ಬೈಕ್‌ಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ರಾಜಾಜಿನಗರದ ಶ್ರೀಕಾಂತ್ ಹಾಗೂ ಗೌತಮ್ ಮೃತರು.

ಹಿಟ್​ ಆ್ಯಂಡ್​ ರನ್​ಗೆ ಸ್ವಿಗ್ಗಿ ಬಾಯ್ಸ್​ ಬಲಿ

ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್​ ಆಗಿ ಕೆಲಸ ಮಾಡುತ್ತಿದ್ದರು. ಒಂದೇ ರೂಮ್‌ನಲ್ಲಿ ವಾಸಿಸುತ್ತಿದ್ದರು. ಸೋಮವಾರ ತಡರಾತ್ರಿ 1.30ಕ್ಕೆ ಕೆಲಸ ಮುಗಿಸಿಕೊಂಡು ಇಬ್ಬರೂ ಒಂದೇ ಬೈಕ್‌ನಲ್ಲಿ ಜಾಲಹಳ್ಳಿ ಕಡೆಯಿಂದ ತುಮಕೂರು ಮುಖ್ಯ ರಸ್ತೆ ಕಡೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ಕಾರೊಂದು ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ತೂರಿ ಬಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರೂ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಗ್ಯಾಂಗ್​ವಾರ್​ಗೆ ರೆಡಿಯಾಗಿದ್ದ 11 ಆರೋಪಿಗಳು ಅರೆಸ್ಟ್​: 18 ಲಾಂಗು ಮಚ್ಚು ಸೀಜ್​ ಮಾಡಿದ ಸಿಸಿಬಿ

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕಾರಿನ ನಂಬರ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಕಾರು ಚಾಲಕನ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Feb 24, 2021, 12:29 PM IST

For All Latest Updates

ABOUT THE AUTHOR

...view details