ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ಜರುಗಲಿದೆ ಬೆಂಗಳೂರು ಕರಗ ಮಹೋತ್ಸವ

ಐತಿಹಾಸಿಕ‌ ಬೆಂಗಳೂರು ಕರಗ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.

By

Published : Mar 9, 2022, 1:32 PM IST

historic-bengaluru-karaga-to-start-from-april-8
ಅದ್ಧೂರಿಯಾಗಿ ಜರುಗಲಿದೆ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು:ರಾಜಧಾನಿ ಬೆಂಗಳೂರಿನ ಹೆಮ್ಮೆಯ ಐತಿಹಾಸಿಕ‌ ಕರಗ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಸಲು ಕರಗ ಉತ್ಸವ ಸಮಿತಿ ತೀರ್ಮಾನಿಸಿದೆ. ಕೋವಿಡ್​​ ಕಾರಣದಿಂದ ಕಳೆದ ಎರಡು ವರ್ಷದಿಂದ ಸರಳವಾಗಿ ನಡೆದಿತ್ತು.

ಸದ್ಯ ಕೋವಿಡ್​​ ಮೂರನೇ ಅಲೆಯಲ್ಲಿ ತೀವ್ರತೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕರಗ ಮಹೋತ್ಸವವನ್ನು ಸಾರ್ವಜನಿಕವಾಗಿ ನಡೆಸಲು ಶಾಸಕ ಪಿ.ಆರ್. ರಮೇಶ್ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಏಪ್ರಿಲ್ 8ರಿಂದ 18ರವರೆಗೆ ಮಹೋತ್ಸವವು ನಡೆಯಲಿದ್ದು, ಸಕಲ ಸಿದ್ಧತೆ ಆರಂಭಗೊಂಡಿದೆ. ಏಪ್ರಿಲ್ 16ರ ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ಜರುಗಲಿದ್ದು, ರಾಜಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಇರಲಿದೆ.

ಆಹ್ವಾನ ಪತ್ರಿಕೆ

ಬೆಂಗಳೂರು ಮಾತ್ರವಲ್ಲದೇ ಸುಮಾರು 15ರಿಂದ 16 ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಧರ್ಮರಾಯ ಸ್ವಾಮಿ, ದ್ರೌಪದಮ್ಮ ದೇವಿಯ ಕರಗ ಉತ್ಸವಗಳು ನಡೆದುಕೊಂಡು ಬಂದಿದೆ. ಕೋವಿಡ್ ಕಾರಣಕ್ಕೆ ಸರ್ಕಾರ ನಿರ್ಬಂಧಿಸಿದ್ದರಿಂದ ಯಾವುದೇ ಜಾತ್ರೆ, ಕರಗಗಳು ಸಾರ್ವಜನಿಕವಾಗಿ ಜರುಗಿಲ್ಲ.

ಬೆಂಗಳೂರಿನ ಕಲ್ಯಾಣ ಹಾಗೂ ಜನಜೀವನ ಸಮೃದ್ಧಿಯಾಗಿ ಇರಲು ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯುತ್ತದೆ. ಬೆಂಗಳೂರು ಮಧ್ಯಭಾಗದಲ್ಲಿರುವ ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 8 ದಿನಗಳ ಉತ್ಸವಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ಈ ಸಾಲಿನ ಕರಗ ಪೂಜಾರಿ ಎ. ಜ್ಞಾನೇಂದ್ರ ಅವರು ಹೊರಲಿದ್ದಾರೆ‌.‌

ಇದನ್ನೂ ಓದಿ:ಮಂತ್ರಾಲಯದಲ್ಲಿ ರಾಯರ 427ನೇ ವರ್ಧಂತಿ ಉತ್ಸವ

ABOUT THE AUTHOR

...view details