ಕರ್ನಾಟಕ

karnataka

ETV Bharat / state

ಬೀಗ ಹಾಕಿರುವ ಮನೆಗಳೇ ಈತನ ಟಾರ್ಗೆಟ್​.. ಕದ್ದ ಆಭರಣಗಳನ್ನ ಅಟ್ಟಿಕಾ ಗೋಲ್ಡ್​ನಲ್ಲಿ ಸೇಲ್ ಮಾಡ್ತಿದ್ದ ಖದೀಮ.. - gold theft

ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿ ಹಾಗೂ ಕದ್ದ ವಸ್ತುಗಳನ್ನ ಪಡೆಯುತ್ತಿದ್ದ ಅಟ್ಟಿಕಾ ಗೋಲ್ಡ್​ ಬ್ರಾಂಚ್​ನ ಮ್ಯಾನೇಜರ್​ನನ್ನ ಬಂಧಿಸುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೀಗ ಹಾಕಿರುವ ಮನೆಗಳೇ ಈತನ ಟಾರ್ಗೆಟ್​...ಕದ್ದ ವಸ್ತುಗಳನ್ನ ಅಟ್ಟಿಕಾ ಗೋಲ್ಡ್​ನಲ್ಲಿ ಮಾರಾಟ

By

Published : Aug 21, 2019, 7:09 PM IST


ಬೆಂಗಳೂರು:ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿ ಹಾಗೂ ಕದ್ದ ಆಭರಣಗಳನ್ನ ಪಡೆಯುತ್ತಿದ್ದ ಅಟ್ಟಿಕಾ ಗೋಲ್ಡ್​ ಬ್ರಾಂಚ್​ನ ಮ್ಯಾನೇಜರ್​ನನ್ನ ಬಂಧಿಸುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್‌ ಡಿ ಯೋಗೀಶ್ ಅಲಿಯಾಸ್ ಮೈಲಾರಿ, ದೇವೇಂದ್ರ ಅಲಿಯಾಸ್​ ಬಾಬು ಬಂಧಿತರು. ದಾಸರಳ್ಳಿ ಬಳಿಯ ನಿವಾಸಿ ಆದಿನಾರಾಯಣ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯಲ್ಲಿನ ಮೈಲಾರ ದೇವಸ್ಥಾನಕ್ಕೆ ತೆರಳಿದ್ರು. ಇದನ್ನು ಟಾರ್ಗೆಟ್ ಮಾಡಿದ ಯೋಗೀಶ್ ಮನೆಯಲ್ಲಿರುವ ಸುಮಾರು 45 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

ಇನ್ನು, ಪೊಲೀಸರು ಆರೋಪಿ ಯೋಗೀಶ್‌ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಕದ್ದ ಆಭರಣಗಳನ್ನ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಬ್ರಾಂಚ್​ನಲ್ಲಿ ಮಾರಾಟ ಮಾಡಿರುವ ವಿಚಾರವನ್ನ ತಿಳಿಸಿದ್ದ. ಹೀಗಾಗಿ ಪೊಲೀಸರು ಅಟ್ಟಿಕಾ ಗೋಲ್ಡ್​ ಬ್ರಾಂಚ್​ನ ಮ್ಯಾನೇಜರ್‌ ದೇವೇಂದ್ರ ಅಲಿಯಾಸ್ ಬಾಬು ಎಂಬಾತನನ್ನ ಬಂಧಿಸಿದ್ದಾರೆ. ಈತ ಎಷ್ಟೇ ಕದ್ದ ಮಾಲುಗಳಿದ್ದರೂ ಅದನ್ನ ತನಗೆ ಮಾರಾಟ ಮಾಡುವಂತೆ ಯೋಗೀಶ್​ಗೆ ತಿಳಿಸಿದ್ದನಂತೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು,ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ 39.10 ಲಕ್ಷ ರೂ. ಬೆಲೆ ಬಾಳುವ 1 ಕೆಜಿ 13ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಸಾಮಾನು, 2 ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಯೋಗೀಶ್​ ವಿರುದ್ಧ ಬಾಗಲಗುಂಟೆಯಲ್ಲಿ 7,ಪೀಣ್ಯದಲ್ಲಿ 7,ಸೋಲದೇವನಹಳ್ಳಿಯಲ್ಲಿ 1 ಪ್ರಕರಣಗಳಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details