ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮದಲ್ಲೂ ಕನ್ನಡ ಕಣ್ಮರೆಯಾಗುತ್ತಿದ್ದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಗರದಲ್ಲಿ ನಡೆಯುತ್ತಿರುವ ಚೂನರ್- ಚೋಪನ್ ಎಲೆಕ್ಟ್ರಿಫೈಡ್ ಸೆಕ್ಷನ್ ಉದ್ಘಾಟನಾ ಕಾರ್ಯಕ್ರಮ.
ಕನ್ನಡ ಭಾಷೆಗಿಲ್ಲ ಜಾಗ: ರಾಜ್ಯದಲ್ಲಿ ನಡೆದ ರೈಲ್ವೆ ಕಾರ್ಯಕ್ರಮದಲ್ಲಿ ಎಲ್ಲವೂ ಹಿಂದಿಮಯ - ಚೂನರ್- ಚೋಪನ್ ಎಲೆಕ್ಟ್ರಿಫೈಡ್ ಸೆಕ್ಷನ್ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ವಿಭಾಗೀಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾನರ್ನಿಂದ ಹಿಡಿದು ಸಚಿವರ, ಅಧಿಕಾರಿಗಳ ಹೆಸರು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಿಂಟ್ ಆಗಿದ್ದು ಕಂಡು ಬಂದಿದೆ.
Hindi name plants, banners used in railway programme
ನಗರದ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ವಿಭಾಗೀಯ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಬ್ಯಾನರ್ನಿಂದ ಹಿಡಿದು ಸಚಿವರ, ಅಧಿಕಾರಿಗಳ ಹೆಸರು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಿಂಟ್ ಆಗಿದೆ. ಈ ಸಮಾರಂಭದಲ್ಲಿ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಉಪಸ್ಥಿತಿ ಇದ್ದು, ಕೂಡ ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡದೆ ಅವಮಾನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮೂರು ತಿಂಗಳ ಹಿಂದೆ ಕೂಡ ಇದೇ ರೀತಿಯ ಅಪಚಾರ ನಡೆದಿತ್ತು.