ಕರ್ನಾಟಕ

karnataka

ETV Bharat / state

Hijab Row: ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​​

hijab high court hearing live updates
ಹಿಜಾಬ್ ವಿವಾದ ವಿಚಾರಣೆ

By

Published : Feb 8, 2022, 1:21 PM IST

Updated : Feb 8, 2022, 4:45 PM IST

16:36 February 08

ವಿಚಾರಣೆ ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿದ ಹೈಕೋರ್ಟ್​​

ಹಿಜಾಬ್​ ವಿವಾದ - ವಿಚಾರಣೆ ನಾಳೆಗೆ ಮುಂದೂಡಿಕೆ

ದಿನವಿಡೀ ವಿಚಾರಣೆ ನಡೆಸಿದ ಹೈಕೋರ್ಟ್​​​​​

16:30 February 08

ಮಧ್ಯಂತರ ಆದೇಶ ಹೊರಡಿಸಿ ಎಂದ ಕಾಮತ್​: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ- ಅಡ್ವೊಕೇಟ್​ ಜನರಲ್​

  • ಕಾಮತ್: ನಮ್ಮ ದೇಶ ಜಾತ್ಯತೀತ ರಾಷ್ಟ್ರ. ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯತೀತತೆ. ನಾಮ, ಕ್ರಾಸ್, ಹಿಜಾಬ್ ಗಳೆಲ್ಲವೂ ಧಾರ್ಮಿಕ ಆಚರಣೆಗಳು. ಆದರೆ, ಸರ್ಕಾರ ಧಾರ್ಮಿಕ ಆಚರಣೆಯಲ್ಲಿ ಅಸ್ಪೃಶ್ಯತೆ ಸೃಷ್ಟಿಸುತ್ತಿದೆ. ನಿನ್ನೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೂರಿಸಲಾಗಿದೆ
  • ಅಡ್ವೊಕೇಟ್ ಜನರಲ್ - ಅನಗತ್ಯ ಆರೋಪ ಮಾಡಬೇಡಿ. ಅಂತಹ ಘಟನೆಗಳು ನಡೆದಿಲ್ಲ.
  • ಕಾಮತ್ - ನಾನು ವಾದ ಮುಗಿಸಿದ ಬಳಿಕ ನೀವು ವಾದ ಮಂಡಿಸಿ
  • ನ್ಯಾಯಮೂರ್ತಿ ದೀಕ್ಷಿತ್ - (ಕಾಮತ್ ಕಡೆ ತಿರುಗಿ) ದೆಹಲಿಯಲ್ಲಿ ಬೇಸಿಗೆ ಜೋರಾಗಿದೆಯೇ . (ಎಜಿ ಕಡೆಗೆ) ಅವರು ಹೇಳಿದ್ದನ್ನೂ ಕೇಳುತ್ತೇವೆ. ನೀವು ಹೇಳಿದ್ದನ್ನೂ ದಪ್ಪ ಅಕ್ಷರಗಳಲ್ಲೇ ದಾಖಲಿಸುತ್ತೇವೆ.
  • ಕಾಮತ್ - ಹಿಜಾಬ್ ವಿಚಾರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಕೆಲವೆಡೆ ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಅಟ್ಟಿಸಿಕೊಂಡು ಹೋಗಲಾಗುತ್ತಿದೆ. ಪ್ರತಿಭಟನೆ, ಬಂದ್​ಗಳಿಗೆ ನಿರ್ಬಂಧ ವಿಧಿಸಬೇಕು. ಈ ನಿಟ್ಟಿನಲ್ಲಿ ಹಿಜಾಬ್ ಧರಿಸುವ ಕುರಿತು ಸೂಕ್ತ ಮಧ್ಯಂತರ ಆದೇಶ ಹೊರಡಿಸಬಹುದು.
  • ಅಡ್ವೊಕೇಟ್ ಜನರಲ್: ಇಂತಹ ಸುಳ್ಳು ಆರೋಪಗಳು ಸರಿಯಲ್ಲ. ಎಲ್ಲಿಯೂ ಅಂತಹ ಘಟನೆಗಳು ನಡೆದಿಲ್ಲ. ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಕೊಡಬೇಕು. ಇಂತಹ ಹೇಳಿಕೆಗಳಿಂದಲೇ ಕಾನೂನು ಸುವ್ಯವಸ್ಥೆ ಕೆಡುತ್ತದೆ. ಪ್ರಸ್ತುತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ.

16:10 February 08

ಇದು ಧಾರ್ಮಿಕ ವರ್ಣಭೇದ ನೀತಿ: ಕಾಮತ್​

  • ರಾಜ್ಯದಲ್ಲಿ ನಾವು ಪಾಶ್ಚಿಮಾತ್ಯ ನೀತಿಗಳನ್ನು ಅನುಸರಿಸುವುದಿಲ್ಲ
  • ನಾವು ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಹಿಜಾಬ್​, ನಮಾಮ್​​ ಧರಿಸಲು ಅವಕಾಶ ಕಲ್ಪಿಸುತ್ತೇವೆ- ಕಾಮತ್​
  • ಶಾಲೆಯಲ್ಲಿ ಅನುಸರಿಸಿದ ನೀತಿಯನ್ನ ಕಾಮತ್​ ವರ್ಣಿಸಿದ್ದು, ಇದು ಒಂದು ರೀತಿಯ ಧಾರ್ಮಿಕ ವರ್ಣಭೇದ ನೀತಿ ಎಂದು ಕಾಮತ್ ಹೇಳಿದ್ದಾರೆ.
  • ಈ ವೇಳೆ ಮಧ್ಯಪ್ರವೇಶಿಸಿದ ಅಡ್ವೊಕೇಟ್ ಜನರಲ್
  • ಅಫಿಡವಿಟ್‌ನಲ್ಲಿ ಹೇಳಿರುವ ವಿಷಯಗಳ ಹೊರತಾಗಿ ಅವರು ಬೇರೆ ಹೇಳಿಕೆಗಳನ್ನು ಸಲ್ಲಿಸಬಾರದು- ಅಡ್ವೊಕೇಟ್​ ಜನರಲ್​
  • ಇದಕ್ಕೆ ಪ್ರತ್ಯುತ್ತರ ನೀಡಿದ ಹಿಜಾಬ್​ ಪರ ವಕೀಲ ಕಾಮತ್​, ಇದು ನ್ಯಾಯಾಲಯ ನನ್ನ ವಾದವನ್ನು ಮಾಡುತ್ತೇನೆ ಮತ್ತು ಅದಕ್ಕೆ ನಾನು ಅರ್ಹ ನಾಗಿದ್ದೇನೆ ಎಂದರು

15:35 February 08

ಹಿಜಾಬ್​ನಿಂದ ಸಾರ್ವಜನಿಕ ಸುವ್ಯವಸ್ಥೆಗೆ ಹೇಗೆ ಧಕ್ಕೆಯಾಗುತ್ತದೆ: ಕಾಮತ್​

  • ಹಿಜಾಬ್​ ಪರ ವಾದ ಮಂಡಿಸುತ್ತಿರುವ ವಕೀಲ ಕಾಮತ್​
  • ಶಾಲಾ-ಕಾಲೇಜಿಗೆ ಹಿಜಾಬ್​ ಧರಿಸಿ ಬಂದರೆ ಸಾಮಾಜಿಕ ಸುವ್ಯವಸ್ಥೆಗೆ ಹೇಗೆ ಧಕ್ಕೆ ಬರಲಿದೆ
  • ನಾನು ಬ್ರಾಹ್ಮಣ, ನನ್ನ ಮಗ ನಮಮ್(ಜನಿವಾರ)​ ಧರಿಸುತ್ತಾನೆ
  • ಇದು ಸಾಮಾಜಿಕ ಸುವ್ಯವಸ್ಥೆಗೆ ಅಡ್ಡಿ ಎಂದು ಕಾಲೇಜು ಹೇಳುತ್ತದೆಯೇ-ಕಾಮತ್​
  • ಹಿಜಾಬ್​ ಧರಿಸುವುದು ಯಾರಿಗೂ ತೊಂದರೆ ಉಂಟು ಮಾಡಲು ಅಲ್ಲ ಎಂದು ವಾದ
  • ಸಾರ್ವಜನಿಕ ಸುವ್ಯವಸ್ಥೆ ಹೆಸರಲ್ಲಿ ಮೂಲಭೂತ ಹಕ್ಕು ಮೊಟಕುಗೊಳಿಸಲು ಅಸಾಧ್ಯ
  • ಸುಪ್ರೀಂಕೋರ್ಟ್​ ತೀರ್ಪು ಪ್ರಸ್ತಾಪಿಸಿದ ವಕೀಲ ಕಾಮತ್​

13:30 February 08

ಅರ್ಜಿ ವಿಚಾರಣೆ ಪುನಾರಂಭ

  • ಹೈಕೋರ್ಟ್​ನಲ್ಲಿ ಹಿಜಾಬ್ ವಿವಾದ ವಿಚಾರಣೆ
  • ಅರ್ಜಿ ವಿಚಾರಣೆಯನ್ನು ಮುಂದೂಡಿದ ಹೈಕೋರ್ಟ್​
  • ಮಧ್ಯಾಹ್ನದ ಉಪಹಾರದ ನಂತರ ವಿಚಾರಣೆ ನಡೆಸಲಿರುವ ಕೋರ್ಟ್​​​​

13:25 February 08

ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ವಕೀಲರು

  • 'ಧರ್ಮಕ್ಕೆ ಯಾವುದು ಅತ್ಯಗತ್ಯ ಮತ್ತು ಯಾವುದು ಅಲ್ಲ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ'
  • 'ಋತುಮತಿಯಾದ ನಂತರ ಮಹಿಳೆ ತನ್ನ ಕೈ ಮತ್ತು ಮುಖವನ್ನು ಅಪರಿಚಿತರಿಗೆ ತೋರಿಸುವುದು ಸರಿಯಲ್ಲ'
  • ಕೇರಳ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾದ ಹದೀಸ್ ಅನ್ನು ಉಲ್ಲೇಖಿಸಿದ ಕಾಮತ್
  • 'ಈ ತೀರ್ಪನ್ನು ಪೂರ್ಣಗೊಳಿಸಿದ ನಂತರ ಬಿಜೋ ಇಮ್ಯಾನುಯೆಲ್ ತೀರ್ಪನ್ನು ಸಹ ಓದುತ್ತೇನೆ'
  • ಹೈಕೋರ್ಟ್​ನಲ್ಲಿ ಹಿರಿಯ ಅಡ್ವೋಕೇಟ್ ದೇವದತ್ತ ಕಾಮತ್ ಹೇಳಿಕೆ

13:19 February 08

ಸಂವಿಧಾನದ ವಿಧಿ 26ರಡಿ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ

  • ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ
  • ಕುರಾನ್ ನಲ್ಲಿ ಮಹಿಳೆಯ ಅಂಗಾಂಗಳು ಕಾಣದಂತೆ ವಸ್ತ್ರ ಧರಿಸುವ ಕುರಿತು ಹೇಳಲಾಗಿದೆ
  • ಸಂವಿಧಾನದ ವಿಧಿ 26ರಡಿ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ
  • ಧಾರ್ಮಿಕ ಆಚರಣೆ ಹಕ್ಕನ್ನು ಸರ್ಕಾರ ನಿರ್ಬಂಧಿಸಲಾಗದು
  • ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ

13:14 February 08

ಹಿಜಾಬ್ ವಿವಾದ ವಿಚಾರಣೆ

ಬೆಂಗಳೂರು:ಹಿಜಾಬ್ ವಿವಾದ ರಾಜ್ಯದಲ್ಲಿ ತಾರಕಕ್ಕೆ ಏರಿದ್ದು, ಇಂದು ಹೈಕೋರ್ಟ್​ ಮಹತ್ವದ ವಿಚಾರಣೆಯನ್ನು ನಡೆಸುತ್ತಿದೆ. ಅರ್ಜಿದಾರರು ಸಲ್ಲಿಕೆ ಮಾಡಿರುವ ನಾಲ್ಕೂ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.

ಈ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಎಲ್ಲ ಭಾವನೆಗಳನ್ನು ಪಕ್ಕಕ್ಕೆ ಇರಿಸಿ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ. ಭಗದ್ಗೀತೆಗಿಂತ ಸಂವಿಧಾನವೇ ಮೇಲು ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ವಿಚಾರಣೆ ವೇಳೆ ಹೇಳಿದ್ದಾರೆ.

ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸಮವಸ್ತ್ರವನ್ನು ನಿರ್ಧರಿಸಲು ನಾವು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ ಎಂದು ಅಡ್ವೊಕೇಟ್ ಜನರಲ್ ಹೇಳಿದ್ದು, ವಿಚಾರಣೆ ಮುಂದುವರೆಯುತ್ತಿದೆ.

Last Updated : Feb 8, 2022, 4:45 PM IST

ABOUT THE AUTHOR

...view details