ಕರ್ನಾಟಕ

karnataka

ETV Bharat / state

ಸಿಂಗಾಪುರ್ ಮೂಲದ ನೌಕೆ ಕಂಪನಿ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ವಿದೇಶಿ ನೌಕೆ ಮತ್ತು ಸ್ಥಳೀಯ ಮೀನುಗಾರರಿದ್ದ ಹಡಗಿನ ನಡುವೆ ಸಂಭವಿಸಿದ ಡಿಕ್ಕಿ ಸಂಬಂಧ ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಶ್ನಿಸಿ ಸಿಂಗಾಪುರ್ ಮೂಲದ‌ ಸಿಎಂಎ ಸಿಜಿಎಂ ಏಷ್ಯಾ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

high-court-refuses-to-quash-case-against-singapore-based-shipping-company
ಸಿಂಗಾಪುರ್ ಮೂಲದ ನೌಕೆ ಕಂಪನಿ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

By

Published : Sep 25, 2022, 9:12 AM IST

ಬೆಂಗಳೂರು:ಮಂಗಳೂರಿನ ಸಮುದ್ರ ತೀರದಲ್ಲಿ ವಿದೇಶಿ ನೌಕೆ ಮತ್ತು ಸ್ಥಳೀಯ ಮೀನುಗಾರರಿದ್ದ ಹಡಗಿನ ನಡುವೆ ಸಂಭವಿಸಿದ ಡಿಕ್ಕಿಯಿಂದ 12 ಮಂದಿಯ ಸಾವಿನ ಘಟನೆ ಕುರಿತು ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಶ್ನಿಸಿ ಸಿಂಗಾಪುರ್ ಮೂಲದ‌ ಸಿಎಂಎ ಸಿಜಿಎಂ ಏಷ್ಯಾ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಕೇಂದ್ರ ಸರ್ಕಾರದ 1981ರ ಅಧಿಸೂಚನೆಯ ಪ್ರಕಾರ ಐಪಿಸಿ ಮತ್ತು ಸಿಆರ್‌ಪಿಸಿಯ ನಿಬಂಧನೆಗಳು ವಿದೇಶಿ ಕಂಪೆನಿಗೆ ಅನ್ವಯಿಸುತ್ತವೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣ ಹಿನ್ನೆಲೆ ಏನು?:2021ರ ಏಪ್ರಿಲ್‌ 13ರಂದು ಮಂಗಳೂರಿನ ಕಡಲ ತೀರದಿಂದ 49 ನಾಟಿಕಲ್‌ ಮೈಲು ದೂರದಲ್ಲಿ, ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಹಾಯುತ್ತಿದ್ದ ಸಿಎಂಎ ಸಿಜಿಎ ಏಷ್ಯಾ ಶಿಪ್ಪಿಂಗ್‌ ನೌಕೆಗೆ 14 ಮಂದಿ ಮೀನುಗಾರರನ್ನು ಹೊಂದಿದ್ದ ಮೀನುಗಾರಿಕೆಯಲ್ಲಿ ತೊಡಗಿದ್ದ ʼರಬ್ಹಾʼ ಎಂಬ ಸ್ಥಳೀಯ ಹಡಗು ಡಿಕ್ಕಿ ಹೊಡೆದಿತ್ತು. ಪ್ರಕರಣದಲ್ಲಿ 12 ಮಂದಿ ಮೀನುಗಾರರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ನಾಟಿಕಲ್‌ ಸರ್ವೇಯರ್‌ ಹಾಗೂ ಉಪ ನಿರ್ದೇಶಕರಿಗೆ ಆದೇಶ ಮಾಡಲಾಗಿತ್ತು.

ನೌಕೆಯ ಬೇಜವಾಬ್ದಾರಿಯಿಂದ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, 2021ರ ಆಗಸ್ಟ್‌ 21ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣಾಧೀನ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಸಿಂಗಾಪುರ್ ಕಂಪೆನಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು.

ಇದನ್ನೂ ಓದಿ:ಶಾಲಾ ಮಕ್ಕಳ ಬ್ಯಾಗ್​ ತೂಕ ಇಳಿಸುವ ಕುರಿತು ಸರ್ಕಾರಕ್ಕೆ ನಿರ್ದೇಶನ ಕೋರಿ ಪಿಐಎಲ್​

ABOUT THE AUTHOR

...view details