ಕರ್ನಾಟಕ

karnataka

ಕೋವಿಡ್-19 ನಿಯಂತ್ರಣಕ್ಕೆ ಹೆರಿಟೇಜ್ ಸಂಸ್ಥೆಯಿಂದ ದೇಣಿಗೆ

By

Published : Apr 1, 2020, 11:12 AM IST

ದೇಶಾದ್ಯಂತ ವಿವಿಧ ಕಾರ್ಯಾಚರಣೆ ಕ್ಷೇತ್ರಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು, ಹೆರಿಟೇಜ್ ಫುಡ್ಸ್ ಲಿಮಿಟೆಡ್ ಒಂದು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದೆ.

heritage
heritage

ಬೆಂಗಳೂರು:ಕೋವಿಡ್-19 ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ, ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಹೆರಿಟೇಜ್ ಫುಡ್ಸ್ ಲಿಮಿಟೆಡ್ ಸರ್ಕಾರದ ಜತೆ ಕೈಜೋಡಿಸಿದೆ.

ದೇಶಾದ್ಯಂತ ವಿವಿಧ ಕಾರ್ಯಾಚರಣೆ ಕ್ಷೇತ್ರಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಒಂದು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಲು ಕಂಪನಿ ನಿರ್ಧರಿಸಿದೆ.

ದೇಣಿಗೆ ನೀಡಲಿರುವ ರಾಜ್ಯದ ವಿವರ ಹಾಗೂ ಮೊತ್ತ ಇಂತಿದೆ:
1. ಮುಖ್ಯಮಂತ್ರಿ ಪರಿಹಾರ ನಿಧಿ ಆಂಧ್ರಪ್ರದೇಶ- 30 ಲಕ್ಷ ರೂಪಾಯಿ
2. ಮುಖ್ಯಮಂತ್ರಿ ಪರಿಹಾರ ನಿಧಿ ತೆಲಂಗಾಣ- 30 ಲಕ್ಷ ರೂಪಾಯಿ
3. ಮುಖ್ಯಮಂತ್ರಿ ಪರಿಹಾರ ನಿಧಿ ಕರ್ನಾಟಕ- 10 ಲಕ್ಷ ರೂಪಾಯಿ
4. ಮುಖ್ಯಮಂತ್ರಿ ಪರಿಹಾರ ನಿಧಿ ತಮಿಳುನಾಡು- 10 ಲಕ್ಷ ರೂಪಾಯಿ
5. ಮುಖ್ಯಮಂತ್ರಿ ಪರಿಹಾರ ನಿಧಿ ಮಹಾರಾಷ್ಟ್ರ- 10 ಲಕ್ಷ ರೂಪಾಯಿ
6. ಮುಖ್ಯಮಂತ್ರಿ ಪರಿಹಾರ ನಿಧಿ ದೆಹಲಿ- 10 ಲಕ್ಷ ರೂಪಾಯಿ

ಕೋವಿಡ್-19 ನಿಯಂತ್ರಣಕ್ಕೆ ಹೆರಿಟೇಜ್ ಸಂಸ್ಥೆಯಿಂದ ದೇಣಿಗೆ

ಕೋವಿಡ್-19 ವಿರುದ್ಧದ ಹೋರಾಟದ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಸಂಸ್ಥೆಯ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಭುವನೇಶ್ವರಿ ನಾರಾ, “ನಾವು ಹಿಂದೆಂದೂ ಕೇಳರಿಯದ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದೇವೆ. ದೇಶದ ಪ್ರತಿಯೊಬ್ಬರೂ ಮನೆಗಳಲ್ಲೇ ಸುರಕ್ಷಿತವಾಗಿ ಉಳಿದುಕೊಳ್ಳುವಂತೆ ನಾನು ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತಿದ್ದೇನೆ. ದೇಶದ ಜವಾಬ್ದಾರಿಯುತ ಪ್ರಜೆಯಾಗಿ, ಸ್ವಯಂ ನಿರ್ಬಂಧ ಹೇರಿಕೊಂಡು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಜಾಗತಿಕ ಸಾಂಕ್ರಾಮಿಕವಾದ ಕೋವಿಡ್-19 ತಡೆಯಲು ನಿಮ್ಮದೇ ಮಾರ್ಗದಲ್ಲಿ ಕೊಡುಗೆ ನೀಡಬೇಕು” ಎಂದು ಕರೆ ನೀಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತ ಕೂಡಾ ಕೋವಿಡ್-19ನ ಬಿಸಿಯನ್ನು ಅನುಭವಿಸುತ್ತಿದ್ದು, ದೇಶಾದ್ಯಂತ ವ್ಯಾಪಕವಾಗಿ ಸೋಂಕು ಹರಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಂದು ಕಾರ್ಪೊರೇಟ್ ಸಂಸ್ಥೆಯು ತನ್ನ ಜವಾಬ್ದಾರಿ ಮೆರೆಯಬೇಕೆಂದು ಹೇಳಿದ್ದಾರೆ.

ABOUT THE AUTHOR

...view details