ಕರ್ನಾಟಕ

karnataka

ETV Bharat / state

ಮುಂಬೈನಲ್ಲಿ ಮಳೆರಾಯನ ಅಬ್ಬರ.. ವಿಮಾನಗಳ ಲ್ಯಾಂಡಿಂಗ್​ ಡೈವರ್ಟ್.. - etv bharat

ಕಳೆದ ವಾರದಿಂದ ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟ ಇನ್ನೂ ಕಡಿಮೆ ಆಗಿಲ್ಲ. ಮಳೆಯಿಂದ ಅವಾಂತರಗಳು ಹೆಚ್ಚಾಗುತ್ತಿದ್ದು, ಹವಾಮಾನ ಇಲಾಖೆ ಮುನ್ನೆಚ್ಚಕೆ ನೀಡಿದೆ. ಈ ನಡುವೆ ಮಳೆ ಅಬ್ಬರ ಹೆಚ್ಚಾಗಿದ್ದರಿಂದ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

By

Published : Jul 2, 2019, 10:10 AM IST

ಬೆಂಗಳೂರು:ಮುಂಬೈನಲ್ಲಿ ರಾತ್ರಿ ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಬೈ ಏರ್ಪೋರ್ಟ್ ರನ್‌ವೇನಲ್ಲಿ ನೀರು ತುಂಬಿದೆ. ಈ ಹಿನ್ನೆಲೆಯಲ್ಲಿ ಮುಂಬೈನಿಂದ ಕೆಲವು ವಿಮಾನಗಳು ಕೆಐಎಎಲ್​ಗೆ ಡೈವರ್ಟ್ ಮಾಡಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಲ್ಯಾಂಡ್ ಆಗಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಲ್ಯಾಂಡ್ ಆದ ವಿಮಾನಗಳು..

ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾನಗಳನ್ನು ಮಾತ್ರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ. ಇನ್ನೂ ಕಡಿಮೆ ಪ್ರಯಾಣಿಕರನ್ನು ಸಾಗಿಸುವ ವಿಮಾನಗಳನ್ನು ಮುಂಬೈ ಹತ್ತಿರದ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ.

ABOUT THE AUTHOR

...view details