ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ: ಸಚಿವ ಸುಧಾಕರ್​​

ರಾಜ್ಯಾದ್ಯಂತ ಇಪ್ಪತ್ತು ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅವರಲ್ಲಿ ನಾಲ್ಕು ಜನ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

Dr Sudhakar
ಡಾ.ಕೆ ಸುಧಾಕರ್

By

Published : Mar 21, 2020, 8:15 PM IST

ಬೆಂಗಳೂರು:ಕರ್ನಾಟಕದಲ್ಲಿ ಇದುವರೆಗೂ ಇಪ್ಪತ್ತು ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವತ್ತು ಒಂದೇ ದಿನದಲ್ಲಿ ಐದು ಜನರಿಗೆ ಸೋಂಕು ತಗುಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಸಲುವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದಾಗಿ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಾ. ಕೆ.ಸುಧಾಕರ್

ಇನ್ನು ರಾಜ್ಯಾದ್ಯಂತ ಇಪ್ಪತ್ತು ಜನರಿಗೆ ಸೋಂಕು ತಗುಲಿದ್ದು, ಅವರಲ್ಲಿ ನಾಲ್ಕು ಜನ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರೆಲ್ಲಾ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದವರಾಗಿದ್ದಾರೆ. ಇನ್ನು ಸೋಂಕಿತರು ಸ್ಕಾಟ್‌ಲ್ಯಾಂಡ್, ಮೆಕ್ಕಾ-ಮದೀನಾ, ದುಬೈನಿಂದ ಬಂದವರಾಗಿದ್ದು, ಹೊರದೇಶಗಳಿಂದ ಬರುವಂತಹವರ ಮೇಲೆ ನಿಗಾ ವಹಿಸಲಾಗಿದೆ ಎಂದರು.

ಕೋಲಾರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಲ್ಲಿ 195 ಪ್ರತ್ಯೇಕ ಹಾಸಿಗೆಗಳನ್ನ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ 20 ಹಾಸಿಗೆಗಳುಳ್ಳ ಐಸುಲೇಷನ್ ವಾರ್ಡ್ ಮಾಡಲಾಗಿದೆ. ಇನ್ನು ಇಟಲಿ, ಫ್ರಾನ್ಸ್, ಸ್ಪೇನ್​ ದೇಶಗಳಿಂದ ನನಗೆ ಅಧಿಕೃತ ಮಾಹಿತಿ ದೊರೆಯುತ್ತಿದ್ದು, ಅಲ್ಲಿ ಒಂದೇ ದಿನಕ್ಕೆ ಮುನ್ನೂರಕ್ಕೂ ಹೆಚ್ಚು ಸಾವು ಸಂಭವಿಸುತ್ತಿರುವುದು ಆತಂಕ ಹೆಚ್ಚು ಮಾಡುತ್ತಿದೆ ಎಂದರು.

ABOUT THE AUTHOR

...view details