ಕರ್ನಾಟಕ

karnataka

ETV Bharat / state

ಸಿಎಂ ಸ್ಥಾನಕ್ಕೆ ಹೆಚ್​ಡಿಕೆ ರಾಜೀನಾಮೆ; ರಾಜ್ಯಪಾಲರಿಂದ ಅಂಗೀಕಾರ

ರಾಜಭವನಕ್ಕೆ ತೆರಳಿ ಹೆಚ್‌ ಡಿ ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗವರ್ನರ್​ ವಜೂಬಾಯಿ ವಾಲಾ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ರು..

ರಾಜೀನಾಮೆ ಸಲ್ಲಿಕೆ

By

Published : Jul 23, 2019, 9:06 PM IST

Updated : Jul 23, 2019, 10:42 PM IST

ಬೆಂಗಳೂರು:ಸದನದಲ್ಲಿ ವಿಶ್ವಾಸಮತ ಕಳೆದುಕೊಳ್ಳುತ್ತಿದ್ದಂತೆ ರಾಜಭವನಕ್ಕೆ ತೆರಳಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು. ರಾಜ್ಯಪಾಲ ವಜೂಬಾಯಿ ವಾಲಾ ರಾಜೀನಾಮೆ ಅಂಗೀಕರಿಸಿದ್ದಾರೆ.

ಸುಮಾರು 14 ತಿಂಗಳ ಕಾಲ ಆಡಳಿತ ನೀಡಿದ್ದ ಕುಮಾರಸ್ವಾಮಿ, ಸದನದಲ್ಲಿ ತಮ್ಮ ಬಹುಮತ ಸಾಬೀತು ಮಾಡುವಲ್ಲಿ ಹೆಚ್​ಡಿಕೆ ನೇತೃತ್ವದ ದೋಸ್ತಿ ಸರ್ಕಾರ ವಿಫಲಗೊಂಡಿತ್ತು. ಹೀಗಾಗಿ ವಿಧಾನಸಭೆಯಿಂದ ನೇರವಾಗಿ ರಾಜ್ಯಪಾಲರನ್ನ ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ವೇಳೆ ಡಿಕೆ ಶಿವಕುಮಾರ್​,ಹೆಚ್​ಡಿ ರೇವಣ್ಣ, ಜಿ ಪರಮೇಶ್ವರ್​ ಸೇರಿದಂತೆ ಅನೇಕ ಜೆಡಿಎಸ್​-ಕಾಂಗ್ರೆಸ್​ನ ಶಾಸಕರು ಉಪಸ್ಥಿತರಿದ್ದರು.

ರಾಜೀನಾಮೆ ಸಲ್ಲಿಕೆಗೆ ಹೆಚ್​ಡಿಕೆ ಆಗಮನ

ವಿಧಾನಸಭೆಯಲ್ಲಿ ಕಳೆದ ಗುರುವಾರ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತ ನಿರ್ಣಯದ ಮೇಲೆ ನಾಲ್ಕು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆ ನಡೆಯಿತು. ಇವತ್ತು 2 ಗಂಟೆಗಳ ಕಾಲ ಭಾಷಣ ಮಾಡಿದ ಕುಮಾರಸ್ವಾಮಿ, ಬಳಿಕ ವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿದರು. ಧ್ವನಿಮತದ ನಂತರ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮತ ವಿಭಜನೆಗೆ ಒತ್ತಾಯಿಸಿದರು. ಬಳಿಕ ಕೋರಂ ಬೆಲ್ ಹೊಡೆದ ನಂತರ ಪರ ವಿರುದ್ಧ ಶಾಸಕರ ತಲೆ ಎಣಿಕೆ ನಡೆಯಿತು. ಇಲ್ಲಿ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ಬಂದವು. ಈ ಮೂಲಕ ಅಧಿಕೃತವಾಗಿ ಸಮ್ಮಿಶ್ರ ಸರ್ಕಾರ ಪತನವಾಯ್ತು.

Last Updated : Jul 23, 2019, 10:42 PM IST

ABOUT THE AUTHOR

...view details