ಕರ್ನಾಟಕ

karnataka

ETV Bharat / state

ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಕೋಚ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

ನಕಲಿ ದಾಖಲೆ ಸಂಬಂಧ ಅರ್ಜುನ ಪ್ರಶಸ್ತಿ ವಿಜೇತ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಮತ್ತು ಅವರ ಕೋಚ್ ಯು.ವಿಮಲ್ ಕುಮಾರ್ ಮತ್ತಿತರರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್
ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್

By

Published : Dec 23, 2022, 10:28 PM IST

ಬೆಂಗಳೂರು: ಜನ್ಮ ದಿನಾಂಕದ ನಕಲಿ ದಾಖಲೆ ನೀಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜುನ ಪ್ರಶಸ್ತಿ ವಿಜೇತ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಮತ್ತು ಅವರ ಕೋಚ್ ಯು.ವಿಮಲ್ ಕುಮಾರ್ ಮತ್ತಿತರರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತು. ಲಕ್ಷ್ಯಸೇನ್ ಮತ್ತು ಅವರ ಕುಟುಂಬದವರು ಹಾಗೂ ಕೋಚ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ರಾಚಯ್ಯ ಅವರಿದ್ದ ಪೀಠ ಈ ಆದೇಶ ನೀಡಿದೆ.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಯಾವುದೇ ಆಧಾರಗಳಿಲ್ಲ. ಜೊತೆಗೆ, ವೃತ್ತಿ ವೈಷಮ್ಯದಿಂದ ಈ ರೀತಿ ಸುಳ್ಳು ದೂರು ನೀಡಲಾಗಿದೆ. ಆದರೆ, ಯಾವುದೇ ಪುರಾವೆ ಇಲ್ಲ. ಹಾಗಾಗಿ ವಿಚಾರಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ ಏನು?:ಲಕ್ಷ್ಯ ಸೇನ್ ಮತ್ತು ಸಹೋದರ ಚಿರಾಗ್ ಸೇನ್ ಅವರು ಜನ್ಮ ದಿನಾಂಕದ ನಕಲಿ ದಾಖಲೆ ನೀಡಿ ವಂಚನೆ ಎಸಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಬೆಂಗಳೂರಿನ ಬ್ಯಾಡ್ಮಿಂಟನ್ ಅಕಾಡೆಮಿ ನಡೆಸುತ್ತಿರುವ ಎಂ.ಜಿ. ನಾಗರಾಜ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಆ ದೂರಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಲಕ್ಷ್ಯ ಸೇನ್ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಅದರಂತೆ ಹೈಗ್ರೌಂಡ್ಸ್ ಪೊಲೀಸರು, ವಂಚನೆ ಮತ್ತು ನಕಲು ಮಾಡಿದ ಆರೋಪದಡಿ ಲಕ್ಷ್ಯಸೇನ್, ಅವರ ತಂದೆ ಧೀರೇಂದ್ರ ಸೇನ್, ತಾಯಿ ನಿರ್ಮಲಾ ಸೇನ್ ಮತ್ತು ರಾಷ್ಟ್ರೀಯ ಕೋಚ್ ವಿಮಲ್ ಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: ನಕಲಿ ವಯೋಮಿತಿ ಆರೋಪ: ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧ ಪ್ರಕರಣ

ABOUT THE AUTHOR

...view details