ಕರ್ನಾಟಕ

karnataka

ETV Bharat / state

ಜಾತಿಗಣತಿ ವರದಿಗೆ ರಾಜ್ಯ ಸರ್ಕಾರದಿಂದ ಎಳ್ಳುನೀರು: ಹೆಚ್. ಕಾಂತರಾಜು ಆರೋಪ

ಕಾಂತರಾಜು 158 ಕೋಟಿ ವೆಚ್ಚಮಾಡಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಜಾತಿ ಗಣತಿಯನ್ನು ಸಹ ನಡೆಸಲಾಗಿತ್ತು. ಈ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಸಮಗ್ರ ವರದಿಯನ್ನು ಸಹ ತಯಾರಿಸಲಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ವರದಿಯನ್ನು ಸ್ವೀಕರಿಸಲು ತಯಾರಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ಗಮಿತ ಅಧ್ಯಕ್ಷ ಹೆಚ್​ ಕಾಂತರಾಜು ಆರೋಪಿಸಿದ್ದಾರೆ.

ಹೆಚ್. ಕಾಂತರಾಜು ಸುದ್ದಿಗೋಷ್ಠಿ

By

Published : Sep 23, 2019, 2:25 PM IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ 158 ಕೋಟಿ ರೂಪಾಯಿ ವೆಚ್ಚ ಮಾಡಿ ಸಿದ್ಧ ಪಡಿಸಲಾಗಿದ್ದ ಜಾತಿ ಗಣತಿ ಸಮೀಕ್ಷೆಗೆ ಬಿಜೆಪಿ ಸರ್ಕಾರ ಎಳ್ಳುನೀರು ಬಿಡಲು ಮುಂದಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ಗಮಿತ ಅಧ್ಯಕ್ಷ ಹೆಚ್. ಕಾಂತರಾಜು ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, 158 ಕೋಟಿ ವೆಚ್ಚಮಾಡಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಜಾತಿ ಗಣತಿಯನ್ನು ಸಹ ನಡೆಸಲಾಗಿತ್ತು. ಈ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಸಮಗ್ರ ವರದಿಯನ್ನು ಸಹ ತಯಾರಿಸಲಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ವರದಿಯನ್ನು ಸ್ವೀಕರಿಸಲು ತಯಾರಿಲ್ಲವೆಂದು ದೂರಿದರು.

ಜಾತಿಗಣತಿ ವರದಿಗೆ ಎಳ್ಳುನೀರು ಬಿಡಲು ಮುಂದಾದ ರಾಜ್ಯ ಸರ್ಕಾರ

2014ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಿರುವ ಸಮೀಕ್ಷೆಯ ವರದಿಯನ್ನು 2015 ಮತ್ತು 2017ರಲ್ಲಿ ಹಾಗೂ 2019 ರಲ್ಲಿ ಬಹಿರಂಗ ವಿಚಾರಣಾ ವರದಿ ಸೇರಿದಂತೆ 136 ವರದಿಗಳನ್ನು ಆಯಾ ಸರ್ಕಾರಗಳಿಗೆ ಸಲ್ಲಿಸಲಾಗಿತ್ತು. ಆದ್ರೆ ಇದೀಗ ಸಂಬಂಧಿಸಿದ ಕೆಲವು ವರದಿಗಳನ್ನು ಸಲ್ಲಿಸಬೇಕಿದೆ. ಇದನ್ನು ತಲುಪಿಸುವ ಪ್ರಯತ್ನ ನಡೆಸಿದರೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮಯ ಅವಕಾಶ ನೀಡುತ್ತಿಲ್ಲ ಎಂದರು.

ಈ ಬಗ್ಗೆ ಹಿಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಕೂಡ ನಡೆಸಲಾಗಿತ್ತು. ಈಗಿನ ಮುಖ್ಯಮಂತ್ರಿಯವರು ಸಮಯಾವಕಾಶ ನೀಡುವುದಕ್ಕೆ ನಿರಾಕರಿಸುವುದಲ್ಲದೆ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಿದ್ದಾರೆ. ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿರುವುದಕ್ಕೆ ಬೇಸರವಿಲ್ಲ. ಬದಲಾಗಿ ವರದಿ ಸಲ್ಲಿಕೆ ಆಗಲಿಲ್ಲ ಎಂಬ ಬೇಸರವಿದೆ ಎಂದು ಕಾಂತರಾಜು ತಿಳಿಸಿದರು.

ಇಡೀ ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿಶಾಲ ಸಮೀಕ್ಷೆಯೊಂದು ರಾಜ್ಯದಲ್ಲಿ ನಡೆದಿದೆ. ಹೆಚ್ಚು ಹಣ ವೆಚ್ಚ ಮಾಡಿ ವರದಿ ಸಿದ್ಧಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಶ್ರಮ ಹಾಗೂ ಹಣ ವೆಚ್ಚ ಮಾಡಲಾಗಿದೆ. ಸರ್ಕಾರ ಈ ವರದಿಯನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮುಂದಾಗಬೇಕು ಎಂದು ಕಾಂತರಾಜು ಆಗ್ರಹಿಸಿದ್ರು.

ABOUT THE AUTHOR

...view details