ಕರ್ನಾಟಕ

karnataka

ETV Bharat / state

ಅಪ್ಪನಿಗಿಂತ ಹೆಚ್ಚು ಪ್ರಶಸ್ತಿ ಬರಲಿ... ಅಪ್ಪು ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ದೊಡ್ಡಗೌಡರು - ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಮಾಜಿ ಪ್ರಧಾನಿ ಹೆಚ್​. ಡಿ. ದೇವೇಗೌಡ, ತಂದೆ ಡಾ. ರಾಜ್​ಕುಮಾರ್​ ಅವರಿಗಿತ ಪುನೀತ್​ ರಾಜ್​​ಕುಮಾರ್​ ಅವರಿಗೆ ಹೆಚ್ಚು ಪ್ರಶಸ್ತಿ ಬರಲಿ ಎಂದು ಹಾರೈಸಿದ್ದಾರೆ.

H-D-devegowda
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ

By

Published : Mar 16, 2020, 1:24 PM IST

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ವರ್ಷ ಕೊರೊನಾ ವೈರಸ್ ಹಿನ್ನಲೆ ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎಂದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ, ಈ ಸಂದರ್ಭದಲ್ಲಿ ಹುಟ್ಟು ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.

45 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಚಿತ್ರರಂಗದಲ್ಲಿ ಪುನೀತ್ ರಾಜ್ ಕುಮಾರ್ ಅವರ ಯಶಸ್ಸನ್ನು ನೋಡಿದ್ದೇವೆ, ಚಿಕ್ಕ ವಯಸ್ಸಿನಲ್ಲಿಯೆ ತಂದೆ ಜೊತೆ ಭಕ್ತ ಪ್ರಹ್ಲಾದ ಅಂಥಹ ಸಿನಿಮಾದಲ್ಲಿ ನಟಿಸಿ ಅದ್ಭುತ ಕೀರ್ತಿ ಗಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ

ಅಪ್ಪು ಅಭಿನಯದ ಯುವರತ್ನ ಚಿತ್ರತಂಡ ಅಮೆರಿಕಕ್ಕೆ​ ಹೋಗಿ ಸಾಂಗ್ ಶೂಟ್ ಮಾಡಬೇಕಿತ್ತು ಅದ್ರೆ ಮಹಾಮಾರಿ ಕೊರೊನಾ ವೈರಸ್​ನಿಂದ ಶೂಟಿಂಗ್ ಕ್ಯಾನ್ಸಲ್ ಆಗಿದೆ. 45 ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಅವರಿಗೆ ಅತ್ಯಂತ ಕೀರ್ತಿಶಾಲಿಯಾಗಿ, ತಂದೆಗಿಂತ ಹೆಚ್ಚು ಪ್ರಶಸ್ತಿಗಳು ಬರಲಿ ಎಂದು ನಾನು ಹಾರೈಸುತ್ತೇನೆ ಎಂದು ದೇವೆಗೌಡರು ಪುನೀತ್ ಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

ABOUT THE AUTHOR

...view details