ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಇರುವ ವಲಸೆ, ಕಟ್ಟಡ ಕಾರ್ಮಿಕರೆಷ್ಟು? ಸರ್ಕಾರ ಅವರಿಗೆ ನೀಡಿದ ನೆರವು ಏನು?

ವಲಸೆ, ಕಟ್ಟಡ ಕಾರ್ಮಿಕರ ಸಮಸ್ಯೆ ನಿವಾರಿಸಲು ನೋಡಲ್ ಅಧಿಕಾರಿ ನೇಮಕ- ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಗೆ ಒಂದರಂತೆ ಸಮುದಾಯ ಭವನ, ಕಲ್ಯಾಣ‌ ಮಂಟಪ, ಖಾಸಗಿ ‌ಕಲ್ಯಾಣ ಮಂಟಪಗಳನ್ನು ಜಿಲ್ಲಾಧಿಕಾರಿಗಳು ವಶಕ್ಕೆ ಪಡೆದು, ಕಟ್ಟಡ ಹಾಗೂ ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡುತ್ತಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಕಲ್ಯಾಣ ಮಂಟಪಗಳನ್ನು ಬಳಕೆ ಮಾಡಿಕೊಂಡಿದೆ.

ಕಾರ್ಮಿಕರ ವಸತಿಗೆ ವ್ಯವಸ್ಥೆ
ಲಾಕ್‌ಡೌನ್ ಸಂಕಷ್ಟ

By

Published : Mar 29, 2020, 4:30 PM IST

ಬೆಂಗಳೂರು: ಕೊರೊನಾ ಹಿನ್ನೆಲೆ ಲಾಕ್ ಡೌನ್ ಆಗಿರುವ ಕಾರಣ ಕಾರ್ಮಿಕರು, ವಲಸೆ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ವಸತಿ, ಆಹಾರ ಕೊರತೆ ಭೀತಿಯಲ್ಲಿ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ವಲಸೆ ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ.

ನಮ್ಮ ರಾಜ್ಯದಲ್ಲಿನ ಕಟ್ಟಡ, ವಲಸೆ ಕಾರ್ಮಿಕರು ಎಷ್ಟಿದ್ದಾರೆ. ಅವರ ನೆರವಿಗೆ ಸರ್ಕಾರ ಕೈಗೊಂಡ‌ ಕ್ರಮ ಏನು ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಕೊರೊನಾ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಅನಿವಾರ್ಯವಾಗಿ ತೆಗೆದುಕೊಂಡ ಈ ಕ್ರಮದಿಂದ ಸಹಜವಾಗಿ ಸಾರ್ವಜನಿಕರು 21 ದಿನಗಳ ಕಾಲ ಮನೆಯಲ್ಲೇ ಕೂತು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಈ ಲಾಕ್ ಡೌನ್‌ನಿಂದ ಅತಿಯಾಗಿ ಬಾಧಿತರಾಗಿರುವವರು ದಿನಗೂಲಿ ಕಾರ್ಮಿಕರು, ಕಟ್ಟಡ, ವಲಸೆ ಕಾರ್ಮಿಕರು.

ಲಾಕ್‌ಡೌನ್ ಸಂಕಷ್ಟ

ಲಾಕ್ ಡೌನ್ ಹಿನ್ನೆಲೆ ಅನ್ನ, ನೀರು, ಸೂರು ಸಿಗದೆ ಆತಂಕಕ್ಕೊಳಗಾಗಿದ್ದಾರೆ. ಅದಕ್ಕಾಗಿಯೇ ಸಾವಿರಾರು ಕಾರ್ಮಿಕರು ವಾಹನ ಸಂಚಾರ ಇಲ್ಲದಿದ್ದರೂ ಕಾಲ್ನಡಿಗೆಯಲ್ಲೇ ನೂರಾರು ಕಿ.ಮೀ. ದೂರ ಕ್ರಮಿಸಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ನಮ್ಮ ರಾಜ್ಯದಲ್ಲೂ ಲಕ್ಷಾಂತರ ಮಂದಿ ವಲಸೆ, ಕಟ್ಟಡ ಕಾರ್ಮಿಕರು ಇದ್ದು, ಅವರೂ ಇದೀಗ ಹಸಿವಿನಿಂದ ಆತಂಕಕ್ಕೆ ಒಳಗಾಗಿದ್ದಾರೆ. ಅದೇ ಆತಂಕದಲ್ಲಿ ಕೆಲವರು ತಮ್ಮ ಊರುಗಳಿಗೆ ಗುಳೇ ಹೊರಟ್ಟಿದ್ದಾರೆ.

ರಾಜ್ಯದಲ್ಲಿನ ಕಟ್ಟಡ, ವಲಸೆ ಕಾರ್ಮಿಕರೆಷ್ಟು?

ನಮ್ಮ ರಾಜ್ಯದಲ್ಲೂ ಲಕ್ಷಾಂತರ ವಲಸೆ ಕಾರ್ಮಿಕರು ಇದ್ದಾರೆ. ಅದರಲ್ಲೂ ಬಹುಪಾಲು ವಲಸೆ, ಕಟ್ಟಡ ಕಾರ್ಮಿಕರು ಇರುವುದು ರಾಜಧಾನಿ ಬೆಂಗಳೂರಿನಲ್ಲಿ. ಸ

ರ್ಕಾರದ ಅಂಕಿಅಂಶ ಪ್ರಕಾರ ಕರ್ನಾಟಕದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಕಟ್ಟಡ ಕಾರ್ಮಿಕರ‌ ಪೈಕಿ ಕೆಲವರು ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

  • ಒಟ್ಟು ವಲಸೆ ಕಾರ್ಮಿಕರು- 65.45 ಲಕ್ಷ
  • ಒಟ್ಟು ಕಟ್ಟಡ ಕಾರ್ಮಿಕರ ಸಂಖ್ಯೆ 15-20 ಲಕ್ಷ
  • ನೋಂದಾಯಿತ ಕಟ್ಟಡ ಕಾರ್ಮಿಕರು- 7.50 ಲಕ್ಷ
  • ಬೆಂಗಳೂರು ನೋಂದಾಯಿತ ಕಟ್ಟಡ ಕಾರ್ಮಿಕರು- 72,400
  • ಮಹಿಳಾ ಕಟ್ಟಡ ಕಾರ್ಮಿಕರು- 2.70 ಲಕ್ಷ
  • ಪುರುಷ ಕಟ್ಟಡ ಕಾರ್ಮಿಕರು- 4.80 ಲಕ್ಷ

ಸರ್ಕಾರದ ನೆರವಿನ ಹಸ್ತ ಏನು?

ವಲಸೆ, ಕಟ್ಟಡ ಕಾರ್ಮಿಕರ ಸಮಸ್ಯೆ ನಿವಾರಿಸಲು ನೋಡಲ್ ಅಧಿಕಾರಿ ನೇಮಕ- ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಗೆ ಒಂದರಂತೆ ಸಮುದಾಯ ಭವನ, ಕಲ್ಯಾಣ‌ ಮಂಟಪ, ಖಾಸಗಿ ‌ಕಲ್ಯಾಣ ಮಂಟಪಗಳನ್ನು ಜಿಲ್ಲಾಧಿಕಾರಿಗಳು ವಶಕ್ಕೆ ಪಡೆದು, ಕಟ್ಟಡ ಹಾಗೂ ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡುತ್ತಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಕಲ್ಯಾಣ ಮಂಟಪಗಳನ್ನು ಬಳಕೆ ಮಾಡಿಕೊಂಡಿದೆ.

  • ಕಾರ್ಮಿಕರ ವಸತಿಗೆ ವ್ಯವಸ್ಥೆ
  • ಕಾರ್ಮಿಕರಿಗೆ ತಲಾ ಒಂದು ಸಾವಿರ ರೂ.‌ಸಹಾಯಧನ
  • ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ವಿತರಣೆ
  • ಎ ದರ್ಜೆ ದೇವಸ್ಥಾನಗಳ ಮೂಲಕ ಕಾರ್ಮಿಕರಿಗೆ ಊಟೋಪಚಾರದ ವ್ಯವಸ್ಥೆ
  • ಕಾರ್ಮಿಕರ ನೆರವಿಗಾಗಿ ಸಹಾಯವಾಣಿ 155214

ABOUT THE AUTHOR

...view details