ಬೆಂಗಳೂರು:ಕೊರೊನಾ ಸೋಂಕಿತರ ಸಹಾಯಕ್ಕಾಗಿ ಸರ್ಕಾರ ಹೆಲ್ಪ್ಲೈನ್ ಬಿಡುಗಡೆ ಮಾಡಿದೆ.
ಕೊರೊನಾ ಸೋಂಕಿತರ ನೆರವಿಗಾಗಿ ಹೆಲ್ಪ್ಲೈನ್ ಬಿಡುಗಡೆ ಮಾಡಿದ ಸರ್ಕಾರ - ಬೆಂಗಳೂರು ಕೊರೊನಾ ಹೆಲ್ಪ್ಲೈನ್
ಕೊರೊನಾ ಸೋಂಕಿತರ ಸಹಾಯಕ್ಕಾಗಿ ಸರ್ಕಾರ ಹೆಲ್ಪ್ಲೈನ್ ಬಿಡುಗಡೆ ಮಾಡಿದ್ದು, ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದ್ರೆ 1912 ಗೆ ಕರೆ ಮಾಡುವಂತೆ ತಿಳಿಸಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೆರವಿಗೆ ಮುಂದಾಗಿದ್ದು, ಹೆಲ್ಪ್ಲೈನ್ ಬಿಡುಗಡೆ ಮಾಡಿದೆ.
ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ್ರೆ 1912 ಗೆ ಕರೆ ಮಾಡಲು ಹೆಲ್ಪ್ ಲೈನ್ ಬಿಡುಗಡೆ ಮಾಡಿದೆ. ತುರ್ತು ಹಾಗೂ ಕೋವಿಡ್-19 ಸಂಬಂಧಿತ ತುರ್ತು ವೈದ್ಯಕೀಯ ನೆರವಿಗೆ 108 ಕ್ಕೆ ಕರೆ ಮಾಡಿ ಎಂದು ಸರ್ಕಾರ ಹಾಗೂ ಬಿಬಿಎಂಪಿಯಿಂದ ಪ್ರಕಟಣೆ ಹೊರಡಿಸಲಾಗಿದೆ.