ಕರ್ನಾಟಕ

karnataka

ETV Bharat / state

ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಕರೆತರಲು ಸರ್ಕಾರ ಬದ್ಧ.. ಸಿಎಂ ಬಿಎಸ್‌ವೈ - bangalore cm news

ಯುಎಇಯಿಂದ ಹಿಂದಿರುಗಿ ಬರುವ ಎಲ್ಲರೂ 14 ದಿನಗಳ ಕ್ವಾರೆಂಟೈನ್‍ಗೆ ಒಳಪಡಲು ಸರ್ಕಾರದ ಜೊತೆಗೆ ಸಂಪೂರ್ಣ ಸಹಕಾರ ನೀಡಬೇಕು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಹೋಟೆಲ್​​ಗಳಲ್ಲಿ ಕ್ವಾರಂಟೈನ್‍ಗೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ.

ವಿದೇಶದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರು
ವಿದೇಶದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರು

By

Published : May 12, 2020, 7:13 PM IST

ಬೆಂಗಳೂರು :ಲಾಕ್​​ಡೌನ್​​ನಿಂದ ವಿದೇಶದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ರಾಜ್ಯಕ್ಕೆ ಮರಳಿ ಕರೆತರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕನ್ನಡಿಗರು ಆತಂಕಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ‌.

ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19ನಿಂದ ತೊಂದರೆಗೀಡಾದ ಯುನೈಟೆಡ್ ‌ಅರಬ್​​ ಎಮಿರೇಟ್ಸ್​​ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸಿಎಂ ವಿಡಿಯೋ ಸಂವಾದ ನಡೆಸಿದರು. 16 ಪ್ರಮುಖ ಅನಿವಾಸಿ ಕನ್ನಡಿಗರು ಸಿಎಂ ಜೊತೆ ಸಂವಾದ ನಡೆಸಿ ಸಮಸ್ಯೆಗಳನ್ನು ವಿವರಿಸಿದರು‌.

ಸಂವಾದದ ನಂತರ ಮಾತನಾಡಿದ ಸಿಎಂ, ಯುಎಇಯಲ್ಲಿ ತೊಂದರೆಗೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಮರಳಿ ರಾಜ್ಯಕ್ಕೆ ಕರೆತರುವ ಪ್ರಯತ್ನವನ್ನು ಸರ್ಕಾರ ಈಗಾಗಲೇ ಮಾಡಿದೆ. ವೀಸಾ ಅವಧಿ ಮುಗಿದ ನಿರೋದ್ಯೋಗಿಗಳು, ರೋಗಿಗಳು ಇತರೆ ಕಾರಣಗಳಿಂದ ವಾಪಸ್ ಬರಲಾಗದೆ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾಯ್ನಾಡಿಗೆ ಕರೆತರಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದರು.

ಅನಿವಾಸಿ ಕನ್ನಡಿಗರನ್ನು ಕರೆತರಲು ಸರ್ಕಾರ ಬದ್ಧ.. ಸಿಎಂ ಯಡಿಯೂರಪ್ಪ

ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಸ್ ಕರೆತರಲು ವಿಮಾನದ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ. ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಯುಎಇಯಿಂದ ಹಿಂದಿರುಗಿ ಬರುವ ಎಲ್ಲರೂ 14 ದಿನಗಳ ಕ್ವಾರೆಂಟೈನ್‍ಗೆ ಒಳಪಡಲು ಸರ್ಕಾರದ ಜೊತೆಗೆ ಸಂಪೂರ್ಣ ಸಹಕಾರ ನೀಡಬೇಕು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಹೋಟೆಲ್​​ಗಳಲ್ಲಿ ಕ್ವಾರಂಟೈನ್‍ಗೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಲ್ಲಿಯೂ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಮಾಡಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಇರುವ ಹೋಟೆಲ್​​ಗಳಲ್ಲಿ ಕ್ವಾರಂಟೈನ್ ಆಗುವ ಇಚ್ಛೆ ಇದ್ದವರು ತಾವೇ ಹಣ ಪಾವತಿಸಿ ಇರಬಹುದು ಎಂದರು.

ತೊಂದರೆಗೆ ಸಿಲುಕಿರುವ ಕನ್ನಡಿಗರು ಆತಂಕಕ್ಕೆ ಒಳಗಾಗದೆ, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಸರ್ಕಾರ ನಿಮ್ಮೊಂದಿಗಿದೆ. ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ಹಾಗೂ ಅವರ ನೆರವಿಗೆ ಧಾವಿಸಲು ಕರ್ನಾಟಕ ಸರ್ಕಾರ ಬದ್ಧ ಎಂದು ಭರವಸೆ ನೀಡಿದರು. ಮಂಗಳೂರಿಗೆ ವಿಮಾನ ಇದೆ, ಬೆಂಗಳೂರಿಗೂ ವಿಮಾನ ಸಂಪರ್ಕ ಕಲ್ಪಿಸಿ ಎನ್ನುವ ಬೇಡಿಕೆ ಬಂದಿದೆ. ಈ ಸಂಬಂಧ ಕೇಂದ್ರದ ಜೊತೆ ಮಾತುಕತೆ ನಡೆಸಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ದುಬೈ ಕನ್ನಡಿಗರ ಬೇಡಿಕೆಗಳು :

ದುಬೈನಿಂದ ಬರುವವರಿಗೆ ಕೂಡಲೇ ಫ್ಲೈಟ್ ವ್ಯವಸ್ಥೆ ಮಾಡಬೇಕು.

ಮಂಗಳೂರಿಗೂ ಹೆಚ್ಚಿನ ಫ್ಲೈಟ್ ವ್ಯವಸ್ಥೆ ಮಾಡಬೇಕು. ಈಗಾಗಲೇ ಯುಎಇ‌ನಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದಾರೆ.

ರಾಜ್ಯಕ್ಕೆ ಬರಲು ಸಾಧ್ಯವಾಗದೇ ಇದ್ದವರೆಗೆ ಆರ್ಥಿಕವಾಗಿ ನೆರವಾಗಬೇಕು.

ತುಂಬ ಕೆಳವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು.

ದುಬೈ ಸೇರಿದಂತೆ ಅನಿವಾಸಿ ಕನ್ನಡಿಗರು ಇಟ್ಟ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಬಗೆಹರಿಸುವುದಾಗಿ ಭರವಸೆ ನೀಡಿದರು.

ABOUT THE AUTHOR

...view details