ಕರ್ನಾಟಕ

karnataka

By

Published : Jun 28, 2020, 1:34 PM IST

ETV Bharat / state

ಕೊರೊನಾ ಮರಣ ಮೃದಂಗ: ಮೃತರ ಅಂತ್ಯಕ್ರಿಯೆಗೆ ಸರ್ಕಾರದಿಂದಲೇ ತಂಡ ರಚನೆ

ಬೆಂಗಳೂರಿನಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ‌ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಮೃತರ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕಾಗಿ ತಂಡ ರಚನೆ ಮಾಡಲಾಗುತ್ತಿದೆ.

ಕೊರೊನಾ ಮರಣ ಮೃದಂಗ
ಕೊರೊನಾ ಮರಣ ಮೃದಂಗ

ಬೆಂಗಳೂರು: ಕೊರೊನಾ ವೈರಸ್ ರಾಜ್ಯದಲ್ಲಿ ನಡುಕ ಹುಟ್ಟಿಸಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕುಟುಂಬದ ಸದಸ್ಯರು ಮೃತದೇಹವನ್ನು ಕೊನೆ ಬಾರಿ ನೋಡಬೇಕು ಎಂದರೂ ಕೊರೊನಾದ ಭಯದಿಂದ ಅದು ಸಾಧ್ಯವಾಗುತ್ತಿಲ್ಲ. ಅಂತಹ ದುಸ್ಥಿತಿಯನ್ನು ಮಹಾಮಾರಿ ಕೊರೊನಾ ತಂದೊಡ್ಡಿದೆ.

ಕೊರೊನಾಕ್ಕೆ ಬಲಿಯಾದರೆ, ವೈಜ್ಞಾನಿಕ ರೀತಿಯಲ್ಲೇ ಅಂತ್ಯಕ್ರಿಯೆ ಮಾಡಬೇಕಿದೆ. ಈ ಸಮಯದಲ್ಲಿ ಹೆಚ್ಚು ಮುನ್ನೆಚ್ಚರಿಕೆ ಅಗತ್ಯವಿದ್ದು, ಕುಟುಂಬ ಸದಸ್ಯರು, ಬಂಧು ಬಳಗದವರು ಯಾರು ಗುಂಪು ಸೇರುವ ಹಾಗಿಲ್ಲ. ಈಗಾಗಲೇ ರಾಜ್ಯದಲ್ಲಿ ಸಾವಿನ ಸಂಖ್ಯೆ 191ಕ್ಕೆ ಏರಿಕೆ ಆಗಿದೆ. ಅದರಲ್ಲೂ ಬೆಂಗಳೂರಿನಲ್ಲೇ ಮೇಲುಗೈ ಸಾಧಿಸಿದೆ.‌

ಬೆಂಗಳೂರಿನಲ್ಲೂ ಕೊರೊನಾ ಮರಣ ಪ್ರಮಾಣ ಹೆಚ್ಚುತ್ತಿದೆ. ಈ‌ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕಾಗಿ ತಂಡ ರಚನೆ ಮಾಡಲಾಗುತ್ತಿದೆ. ಮೃತಪಟ್ಟವರ ಕುಟುಂಬಸ್ಥರು ಅಂತ್ಯಕ್ರಿಯೆಗೆ ಬರುತ್ತಿಲ್ಲ. ಮೃತದೇಹವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸರ್ಕಾರವೇ ಒಂದು ತಂಡ ರಚನೆ ಮಾಡಿ, ಸರ್ಕಾರದ ಗೋಮಾಳ ಜಮೀನಿನಲ್ಲಿ ಮೃತರನ್ನ ಹೂಳಲು ಚಿಂತನೆ ನಡೆಸಿದೆ.

ಈಗಾಗಲೇ ಮೃತದೇಹವನ್ನು ಸಾಗಿಸಲು ಬೆಂಗಳೂರು ಗ್ರಾಮಾಂತರ 4 ಆ್ಯಂಬುಲೆನ್ಸ್, ಬೆಂಗಳೂರಿನಲ್ಲಿ 10 ಆ್ಯಂಬುಲೆನ್ಸ್ ಇವೆ. ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

ABOUT THE AUTHOR

...view details