ಕರ್ನಾಟಕ

karnataka

ETV Bharat / state

ಐಎಂಎ ಅವ್ಯವಹಾರ: 8 ತಿಂಗಳ ಹಿಂದೆಯೇ ಪಬ್ಲಿಕ್ ನೊಟೀಸ್ ಪ್ರಕಟಿಸಿದ್ದರೂ ಜನ ಮೋಸ ಹೋದ್ರು! - kannadanews

ಐಎಂಎ ಕಂಪನಿ ಅವ್ಯವಹಾರ ಸಂಬಂಧ ಸರ್ಕಾರ 8 ತಿಂಗಳ ಹಿಂದೆಯೇ ಐಎಂಎ ಹೂಡಿಕೆದಾರರಿಗೆ ಪಬ್ಲಿಕ್ ನೊಟೀಸ್ ನೀಡುವ ಮೂಲಕ ಎಚ್ಚರಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಐಎಂಎ ಅವ್ಯವಹಾರ ಸಂಬಂಧ 8 ತಿಂಗಳ ಹಿಂದೆಯೇ ಸರ್ಕಾರದಿಂದ ಪಬ್ಲಿಕ್ ನೊಟೀಸ್

By

Published : Jun 12, 2019, 6:05 PM IST

ಬೆಂಗಳೂರು:ಐಎಂಎ ಕಂಪನಿ ಅವ್ಯವಹಾರ ಸಂಬಂಧ 8 ತಿಂಗಳ ಮೊದಲೇ‌ ಸರ್ಕಾರಕ್ಕೆ ಮಾಹಿತಿ ಇತ್ತು ಎಂಬ ವಿಚಾರ ಬಯಲಾಗಿದೆ.

ಆರ್​​ಬಿಐ ನಿಯಮಾವಳಿ ಪಾಲಿಸದ ಐಎಂಎ ಕಂಪನಿ ವಿರುದ್ಧ 8 ತಿಂಗಳ ಹಿಂದೆಯೇ ಹೂಡಿಕೆದಾರರಿಗೆ ಪಬ್ಲಿಕ್ ನೊಟೀಸ್ ನೀಡುವ ಮೂಲಕ ಎಚ್ಚರಿಸಿತ್ತು. 2018 ರ ನವಂಬರ್ 20 ರಂದು ಪಬ್ಲಿಕ್ ನೋಟಿಸ್ ಹೊರಡಿಸಿದ್ದ ಸರ್ಕಾರ ಐಎಂಎ ಎಂಬ ಕಂಪನಿ ಹೂಡಿಕೆದಾರರಿಂದ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವುದಾಗಿ ಅವ್ಯವಹಾರದ ಕುರಿತು ಬೆಂಗಳೂರು ಉತ್ತರ ತಹಶಿಲ್ದಾರಿಂದ ಪಬ್ಲಿಕ್ ನೊಟೀಸ್​ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ.

ಐಎಂಎ ಅವ್ಯವಹಾರ ಸಂಬಂಧ 8 ತಿಂಗಳ ಹಿಂದೆಯೇ ಸರ್ಕಾರದಿಂದ ಪಬ್ಲಿಕ್ ನೊಟೀಸ್

ಆರ್​​ಬಿಐ ಮಾಹಿತಿ ಹಿನ್ನೆಲೆ 2018 ರ ಜುಲೈನಲ್ಲಿ ರಾಜ್ಯ ಮಟ್ಟದ ಸಮನ್ವಯ ಸಮಿತಿ ರಾಜ್ಯ ಮುಖ್ಯಕಾರ್ಯದರ್ಶಿ, ಅರ್​ಬಿಐನ ರಾಜ್ಯದ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಸಭೆ ಸೇರಿ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವ ಕಂಪನಿ ವಿರುದ್ಧ ಸಿಐಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನೆಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದರು. ಇಷ್ಟಾದರೂ ಹೂಡಿಕೆದಾರರು ಎಚ್ಚೆತ್ತುಕೊಳ್ಳದೆ ಮೋಸ ಹೋಗಿದ್ದಾರೆ.

ABOUT THE AUTHOR

...view details