ಕರ್ನಾಟಕ

karnataka

ETV Bharat / state

ನೌಕರ ವಿರೋಧಿ ನಿಯಮಾವಳಿ ಹಿಂಪಡೆಯುವ ಭರವಸೆ ನೀಡಿದ ಮುಖ್ಯ ಕಾರ್ಯದರ್ಶಿ - Government Chief Secretary P Ravikumar

ನೌಕರ ವಿರೋಧಿ ನಡತೆ ನಿಯಮಾವಳಿಗಳನ್ನು ಹಿಂಪಡೆಯುವ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಭರವಸೆ ನೀಡಿದ್ದಾರೆಂದು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಪಿ.ಗುರುಸ್ವಾಮಿ ತಿಳಿಸಿದ್ದಾರೆ.

protest
ಪ್ರತಿಭಟನೆ

By

Published : Jan 12, 2021, 5:57 PM IST

ಬೆಂಗಳೂರು: ಸಚಿವಾಲಯ ನೌಕರರ ಗಳಿಕೆ ರಜೆ ನಗದೀಕರಣ ತಡೆಹಿಡಿದಿರುವುದನ್ನು ಹಿಂದಕ್ಕೆ ಪಡೆಯುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆ ಸ್ಥಗಿತ, ಗಳಿಕೆ ರಜೆ ನಗದೀಕರಣ ರದ್ದತಿ, ಸೇವಾ ನಿಯಮಗಳ ತಿದ್ದುಪಡಿ ಮತ್ತು ಹುದ್ದೆಗಳ ಕಡಿತ ಹಾಗೂ ಕಾರ್ಮಿಕ ವಿರೋಧಿ ಅಂಶಗಳ ಕುರಿತಂತೆ ಹಲವಾರು ಆದೇಶಗಳನ್ನು ಹೊರಡಿಸಿರುವುದನ್ನು ಖಂಡಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯ ನೌಕರರ ಸಂಘ ಜಂಟಿಯಾಗಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ...ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಶೀರ್ವದಿಸಿ, ಕೈಕುಲುಕುವ ಶ್ವಾನ... ವಿಡಿಯೋ ವೈರಲ್​!

ಪ್ರತಿಭಟನೆ ನಂತರ ನೌಕರ ವಿರೋಧಿ ನಿಯಮಾವಳಿಗಳನ್ನು ಹಿಂಪಡೆಯುವ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಭರವಸೆ ನೀಡಿದ್ದಾರೆಂದು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಪಿ.ಗುರುಸ್ವಾಮಿ ತಿಳಿಸಿದ್ದಾರೆ.

ABOUT THE AUTHOR

...view details