ಬೆಂಗಳೂರು: ನಗರದ ಕುಖ್ಯಾತ ರೌಡಿ ಸಹೋದರರಾದ ಸಾಗರ್ ಅಲಿಯಾಸ್ ವೀರು ಹಾಗೂ ಸಂಜಯ್ ಅಲಿಯಾಸ್ ಸಂಜುನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ನಟೋರಿಯಸ್ ರೌಡಿಶೀಟರ್ ಕುಳ್ಳು ರಿಜ್ವಾನ್ ಸಹಚರರು ಮತ್ತು ಕೊಲೆಯತ್ನ, ದರೋಡೆ, ಸುಲಿಗೆ, ಅಪಹರಣ, ಹಲ್ಲೆ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದರು. ಇವರ ವಿರುದ್ಧ ಹನುಮಂತನಗರ ಹಾಗೂ ಆರ್.ಎಂ.ಸಿ ಯಾರ್ಡ್ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗಿದೆ.
ಬೆಂಗಳೂರಿನ ರೌಡಿ ಸಹೋದರರ ವಿರುದ್ಧ ಗೂಂಡಾ ಕಾಯ್ದೆ ಜಾರಿ - ಗೂಂಡಾ ಕಾಯ್ದೆಯಡಿ ಬಂಧನ
ಬೆಂಗಳೂರಿನ ರೌಡಿ ಸಹೋದರರೆಂದೇ ಕುಖ್ಯಾತರಾದ ಸಾಗರ್ ಅಲಿಯಾಸ್ ವೀರು ಹಾಗೂ ಸಂಜಯ್ ಅಲಿಯಾಸ್ ಸಂಜುನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರೌಡಿ ಸಹೋದರರು
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್‌ನಲ್ಲಿ ಎದುರಾಳಿ ಬಣದ ಮನೋಜ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧಿಸಲ್ಪಟ್ಟಿದ್ದರು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಸಹೋದರರನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದೆ.
ಇದನ್ನೂ ಓದಿ:ನ್ಯಾಯಾಧೀಶ ದಂಪತಿ ಮೇಲೆ ಹಲ್ಲೆ: ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ.. ಲೈಸನ್ಸ್ ರಿವಾಲ್ವರ್ - ರೈಫಲ್ ದರೋಡೆ