ಬೆಂಗಳೂರು:ನಟ ಪುನೀತ್ ರಾಜ್ಕುಮಾರ್ ಕನಸಿನ 'ಗಂಧದಗುಡಿ' ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಯೂಟ್ಯೂಬ್ನಲ್ಲಿ ಇಂದು ಬಿಡುಗಡೆಯಾಗಿದ್ದು, ರಿಲೀಸ್ ಆದ ಆರು ಗಂಟೆಗಳಲ್ಲಿ 16 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಮೆಚ್ಚುಗೆ ವ್ಯಕ್ತಪಡಿಸಿದ ನಟ ಶಿವರಾಜ್ ಕುಮಾರ್ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಮೂಡಿ ಬಂದಿರುವ ಸಾಕ್ಷ್ಯಚಿತ್ರ ಇದಾಗಿದ್ದು, ಪಾರ್ವತಮ್ಮ ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಗೊಳಿಸಲಾಗಿತ್ತು. ಈ ಚಿತ್ರ 2022ರಲ್ಲಿ ರಿಲೀಸ್ ಆಗಲಿದೆ ಎಂದು ಟೀಸರ್ನಲ್ಲಿ ತಿಳಿಸಲಾಗಿದೆ.
ಒಂದು ನಿಮಿಷ 20 ಸೆಕೆಂಡಿನ ವಿಡಿಯೋ:
ಡಾ.ರಾಜ್ ಕುಮಾರ್ 1973ರಲ್ಲಿ ತಮ್ಮ ಅಭಿನಯದ ಚಲನಚಿತ್ರ ಗಂಧದಗುಡಿಯಲ್ಲಿ ಕಾಡೊಳಗಿನ ಪ್ರಾಣಿ- ಪಕ್ಷಿಗಳ ಸಂರಕ್ಷಣೆ ಮಾಡುವಂತೆ ಕರೆ ಕೊಟ್ಟ ಧ್ವನಿಯನ್ನೇ ಈ ಟೀಸರ್ನಲ್ಲಿ ಬಳಸಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿರುವ ವನ್ಯಜೀವಿಗಳು ಹಾಗೂ ಅರಣ್ಯ ಸಂಪತ್ತಿನ ಲೋಕವನ್ನು ಅನಾವರಣ ಮಾಡುವ ದೃಶ್ಯಗಳನ್ನು ಒಂದು ನಿಮಿಷ ಇಪ್ಪತ್ತು ಸೆಕೆಂಡಿನ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಅಶ್ವಿನಿ ಟ್ವೀಟ್:
ಸಾಕ್ಷ್ಯಚಿತ್ರದ ಟೀಸರ್ ಕುರಿತಂತೆ ಪುನೀತ್ ಪತ್ನಿ ಅಶ್ವಿನಿ, ಅಪ್ಪು ಕನಸಿದು. ಅದ್ಭುತ ಪಯಣ, ನೆಲದ ಘನತೆಯನ್ನು ಮೆರೆಸುವ ಕಥನ ಮರುಕಳಿಸಿದ ಚರಿತ್ರೆಯೇ ಈ 'ಗಂಧದ ಗುಡಿ' ಎಂದು ಟ್ವೀಟ್ ಮಾಡಿದ್ದಾರೆ.
ಪಾಸಿಟಿವ್ ಕಾಮೆಂಟ್ಸ್:
ಟೀಸರ್ ವೀಕ್ಷಿಸಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಅಪ್ಪು ಇಲ್ಲದೇ ಬಹಳ ಬೇಸರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ವನ್ಯಜೀವಿಗಳು ಹಾಗೂ ಪರಿಸರ ಪ್ರೇಮದ ಬಗೆಗಿನ ಅಪ್ಪುಗಿದ್ದ ಕಾಳಜಿಯನ್ನು ಪ್ರಶಂಸಿದ್ದಾರೆ.
ಸಿಎಂ ಬೊಮ್ಮಾಯಿ ಮೆಚ್ಚುಗೆ:
ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಇದನ್ನೂ ಓದಿ:Karnataka Covid: ಇಂದು 301 ಹೊಸ ಕೇಸ್ ಪತ್ತೆ.. 7 ಸೋಂಕಿತರು ಕೋವಿಡ್ಗೆ ಬಲಿ