ಕರ್ನಾಟಕ

karnataka

ಕೋರಮಂಗಲ ಕೋವಿಡ್ ಕೇರ್ ಸೆಂಟರ್​​ನಲ್ಲಿ ವ್ಯವಸ್ಥೆ ಹೇಗಿದೆ ಗೊತ್ತಾ?

By

Published : Jul 13, 2020, 3:36 PM IST

ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ರೋಗಿಗಳಿಗೆ ಬಿಬಿಎಂಪಿ ಉತ್ತಮ ಸೌಲಭ್ಯ ಕಲ್ಪಿಸಿರುವ ಬಗ್ಗೆ ವಿಡಿಯೋವೊಂದು ಹೊರಬಿದ್ದಿದೆ.

Koramangala Kovid Care Center
ಕೋವಿಡ್ ಕೇರ್ ಸೆಂಟರ್ ಊಟದ ವ್ಯವಸ್ಥೆ

ಬೆಂಗಳೂರು: ನಗರದ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ರೋಗಿಗಳಿಗೆ ಬಿಬಿಎಂಪಿ ಉತ್ತಮ ಸೌಲಭ್ಯ ಕಲ್ಪಿಸಿರುವ ಬಗ್ಗೆ ಇಲ್ಲಿನ ರೋಗಿಗಳು ವಿಡಿಯೋ ಮಾಡಿದ್ದಾರೆ.

ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇಲ್ಲದೇ ಇರುವವರನ್ನು ಇಲ್ಲಿ ದಾಖಲಿಸಿ ಉತ್ತಮ ಹಾಸಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗೆಯೇ ಉತ್ತಮ ಆಹಾರ, ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಇಲ್ಲಿನ ರೋಗಿಗಳು ತಿಳಿಸಿದ್ದಾರೆ.

ಕೋರಮಂಗಲ ಕೋವಿಡ್ ಕೇರ್ ಸೆಂಟರ್

ಅಲ್ಲದೆ ಸಮಯಕ್ಕೆ ಸರಿಯಾಗಿ ತಿಂಡಿ, ಎರಡು ಹೊತ್ತು ಊಟ ಹಾಗೂ ರಾಗಿ ಗಂಜಿ, ಹಣ್ಣು ಸಹ ನೀಡಲಾಗುತ್ತಿದೆ. ಅಲ್ಲದೆ ಸ್ವಚ್ಛತೆಯ ವಿಷಯಕ್ಕೆ ಬಂದರೆ ಆವರಣವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಲಾಗಿದೆ. ಒಂದು ವಾರ್ಡ್​ನಲ್ಲಿ ಹತ್ತು ಬೆಡ್, ಟಿವಿ ಕೂಡಾ ಇದೆ. ಆದರೆ ಸ್ವಲ್ಪ ಮಟ್ಟಿಗೆ ಸೊಳ್ಳೆ ಸಮಸ್ಯೆ ಇದೆ ಎಂದು ವಿವರಿಸಿದ್ದಾರೆ.

ABOUT THE AUTHOR

...view details