ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಯತ್ನಿಸಿದ ಇಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 90 ಲಕ್ಷ ಮೌಲ್ಯದ ಒಟ್ಟು 1.7 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಥಾಯ್ಲೆಂಡ್ ದೇಶದ ಫುಕೆಟ್ ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 28 ವರ್ಷದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಆತ ಧರಿಸಿದ ಬಟ್ಟೆಯೊಳಗೆ ಚಿನ್ನದ 18 ಬಿಸ್ಕತ್ ಗಳು ಪತ್ತೆಯಾಗಿದೆ. ಬಟ್ಟೆಯೊಳಗೆ ಮರೆಮಾಚಿ ಚಿನ್ನವನ್ನಿಟ್ಟು ನಂತರ ಹೊಲಿಗೆ ಹಾಕಿ ಚಿನ್ನದ ಅಕ್ರಮ ಚಿನ್ನ ಸಾಗಣೆಗೆ ಮುಂದಾಗಿದ್ಧ. ಬಂಧಿತ ಆರೋಪಿಯಿಂದ 63 ಲಕ್ಷ ಮೌಲ್ಯದ 1.199 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.