ಬೆಂಗಳೂರು :ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರು ಫೋಟೊ ಹಾಕುವಾಗ ಜಾಗ್ರತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಆದರೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಾಕುತಿದ್ದರು. ಹೀಗಾಗಿ ಇದನ್ನೇ ಟಾರ್ಗೆಟ್ ಮಾಡಿರುವ ಖದೀಮರು ಫೋಟೊಗಳನ್ನು ಅಶ್ಲೀಲವಾಗಿ ಬಿಂಬಿಸಿ ಬೆದರಿಕೆ ಹಾಕುತ್ತಿದ್ದಾರೆ.
ಯುವತಿಯರೇ ಜಾಲತಾಣಗಳಲ್ಲಿ ಫೋಟೊ ಹಾಕುವ ಮುನ್ನ ಎಚ್ಚರ..ಎಚ್ಚರ..! - ಯುವತಿಯರ ಅಶ್ಲೀಲ ಚಿತ್ರ ಪೋಸ್ಟ್ ಮಾಡಿದ ಕಿಡಿಗೆಡಿಗಳು
ಅಶ್ಲೀಲವಾಗಿ ಫೋಟೊ ಎಡಿಟ್ ಮಾಡಿದ್ದು ಮಾತ್ರವಲ್ಲದೆ ಯುವತಿ ಅಕೌಂಟ್ಗೆ ಅಶ್ಲೀಲ ಸಂದೇಶ ಕಳುಹಿಸಿ ಹಣ ಕೊಡುವಂತೆ ಪೀಡಿಸಿದ್ದಾರೆ. ಸದ್ಯ ಘಟನೆ ಸಂಬಂಧ ಯುವತಿ ದಕ್ಷಿಣ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳು ಇನ್ಸ್ಟಾಗ್ರಾಮ್ನಲ್ಲಿದ್ದ 21 ವರ್ಷದ ಯುವತಿಯ ಫೋಟೊಗಳನ್ನು ಅಶ್ಲೀಲವಾಗಿ ಬಿಂಬಿಸಿ ಬಳಿಕ ಹೊಸ ಅಕೌಂಟ್ ಕ್ರಿಯೇಟ್ ಮಾಡಿ ಯುವತಿಯ ಫೋಟೊ ಅಪ್ಲೋಡ್ ಮಾಡಿದ್ದಾರೆ. ಫೋಟೊ ನೋಡ್ತಿದ್ದಂತೆ ಸ್ನೇಹಿತರು ಯುವತಿಗೆ ಕರೆ ಮಾಡಿ ತಿಳಿಸಿದ್ದಾರೆ.
ಸಂತ್ರಸ್ತ ಯುವತಿ Kabir-vadhava ಎಂಬ ಅಕೌಂಟ್ನಲ್ಲಿ ಫೋಟೊ ಅಪ್ಲೋಡ್ ಮಾಡಿದ್ದನ್ನು ನೋಡಿ ದಂಗಾಗಿದ್ದಾರೆ. ಅಶ್ಲೀಲವಾಗಿ ಫೋಟೊ ಎಡಿಟ್ ಮಾಡಿದ್ದು ಮಾತ್ರವಲ್ಲದೆ ಯುವತಿ ಅಕೌಂಟ್ಗೆ ಅಶ್ಲೀಲ ಸಂದೇಶ ಕಳುಹಿಸಿ ಹಣ ಕೊಡುವಂತೆ ಪೀಡಿಸಿದ್ದಾರೆ. ಸದ್ಯ ಘಟನೆ ಸಂಬಂಧ ಯುವತಿ ದಕ್ಷಿಣ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗ್ತಿದ್ದಂತೆ ಅಕೌಂಟ್ ಡಿಲೀಟ್ ಮಾಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.